ಹುಕ್ಕೇರಿ: ಸಮಾಜದ ಪರವಾಗಿ ವಸ್ತುನಿಷ್ಠ ವರದಿಗಳನ್ನು ನೀಡುವ ಮೂಲಕ ಮುಖ್ಯಭಾಗವಹಿಸುವ ಪತ್ರಕರ್ತರಿಗೆ ಸರ್ಕಾರದಿಂದ ಸಮರ್ಪಕವಾದ ಸೇವಾ ಸೌಲಭ್ಯಗಳು ಕಲ್ಪನೆಯಾಗಬೇಕು ಎಂದು ಯರಗಟ್ಟಿ ಪಬ್ಲಿಕ್ ಶಾಲೆಯ ಪದವಿ ಪೂರ್ವ ವಿಭಾಗದ ಪ್ರಾಚಾರ್ಯರಾದ ಕಿರಣ ಚೌಗಲಾ ಹೇಳಿದರು.
ಅವರು ಇತ್ತೀಚಿಗೆ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಬಳಿ ಇರುವ ಮಹಿಳಾ ಸ್ವಧಾರ ಆಶ್ರಯ ಗೃಹದಲ್ಲಿ ಆಯೋಜಿಸಲಾದ ಕರ್ನಾಟಕ ಪತ್ರಕರ್ತರ ಸಂಘದ ಹುಕ್ಕೇರಿ ತಾಲೂಕ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
“ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಅನೇಕ ಅಡಚಣೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಬಸ್ ಪಾಸ್ ಸೌಲಭ್ಯ, ಪತ್ರಿಕಾ ಭವನ ನಿರ್ಮಾಣ ಸೇರಿದಂತೆ ಮೂಲಭೂತ ಸೌಲ್ಯಗಳ ಅಗತ್ಯವಿದೆ. ಸರ್ಕಾರವು ಈ ಬಗ್ಗೆ ಗಂಭೀರವಾಗಿ ಸ್ಪಂದಿಸಬೇಕಾಗಿದೆ,” ಎಂದು ಅವರು ಅಭಿಪ್ರಾಯಪಟ್ಟರು.
ಇದೆ ಸಂದರ್ಭದಲ್ಲಿ ಕಿರಣ ಚೌಗಲಾ ಅವರನ್ನು ಹುಕ್ಕೇರಿ ತಾಲೂಕ ಘಟಕದ ಗೌರವಾಧ್ಯಕ್ಷರಾಗಿ ಅಧಿಕೃತವಾಗಿ ನೇಮಕ ಮಾಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ನಂದಕಿಶೋರ್ ಗೌಡರ, ಹಿರಿಯ ಪತ್ರಕರ್ತ ಎ.ಎಮ್. ಕರ್ಣಾಚಿ, ಪ್ರಧಾನ ಕಾರ್ಯದರ್ಶಿ ಎ.ವೈ. ಸೋನ್ಯಾಗೋಳ, ಖಜಾಂಚಿ ನಿರಂಜನ್ ಶಿರೂರು, ಸಂಘಟನಾ ಕಾರ್ಯದರ್ಶಿ ನೀಲಕಂಠ ಭೂಮಣ್ಣವರ, ಸಂಚಾಲಕ ರಮೇಶ ಬಾಗೇವಾಡಿ ಮತ್ತು ಕಾರ್ಯದರ್ಶಿ ಕುಶಾ ನಾಗನೂರಿ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ವರದಿ: ಎ.ವೈ. ಸೋನ್ಯಾಗೋಳ
📞 ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ.