ಬೆಳಗಾವಿ: ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಭವನ, ಮಹಾಂತೇಶನಗರ, ಬೆಳಗಾವಿಯಲ್ಲಿ ಶ್ರಾವಣ ಮಾಸದ ಅಂಗವಾಗಿ “ಶ್ರಾವಣ ಸತ್ಸಂಗ” ಕಾರ್ಯಕ್ರಮವು ಭಾವಪೂರ್ಣವಾಗಿ ಜರುಗಿತು. ಈ ಸತ್ಸಂಗದಲ್ಲಿ ಬಸವತತ್ವ ಅನುಭವ ಕೇಂದ್ರದ ಪೂಜ್ಯ ವಾಗ್ದೇವಿ ತಾಯಿಯವರು ಪ್ರಬೋಧನ ನೀಡಿ, “ಪೂಜೆಯು ಡಾಂಬಿಕತೆಯಲ್ಲ, ಅದು ತನ್ನನ್ನು ತಾನು ಅರಿತು ನಡೆಸುವ ಒಂದು ಆಂತರಿಕ ಯಾತ್ರೆ” ಎಂಬ ತಾತ್ವಿಕ ಸಂದೇಶವನ್ನು ನೀಡಿದರು.
ಪೂಜ್ಯ ತಾಯಿಯವರು ಹೇಳುವಂತೆ, ನೈಜ ಪೂಜೆಯು ಮನಸ್ಸಿನಿಂದ ಮಾಡುವ ಕಾರ್ಯವಾಗಿದ್ದು, ಅದರ ಮೂಲಕ ಒಬ್ಬನು ತನ್ನೊಳಗಿನ ಚೈತನ್ಯವನ್ನು ಅರಿಯಬೇಕು. “ಅನ್ವಯವಿಲ್ಲದ ಪಾಠಕ್ಕಿಂತ ಅನುಭವದ ಮೂಲಕ ಬರುವ ಬೋಧನೆ ಶ್ರೇಷ್ಠ. ಲಿಂಗ ಚೈತನ್ಯವೇ ಜೀವದ ಮೂಲ. ಆಹಾರವೆಂದರೆ ಪ್ರಸಾದ, ಚರಿತ್ರೆ ಎಂದರೆ ಆತ್ಮ” ಎಂದು ಅವರು ತಮ್ಮ ಭಾಷಣದಲ್ಲಿ ಅಭಿಪ್ರಾಯಪಟ್ಟರು.
ಪೂಜ್ಯ ಕುಮುದಿನಿ ತಾಯಿಯವರು ಗೌರವಾನ್ವಿತ ಉಪಸ್ಥಿತಿ ದಾಖಲಿಸಿದರು. ಶರಣೆ ಮಹಾದೇವಿ ಅರಳಿ ಅವರು ಸಾಮೂಹಿಕ ಪ್ರಾರ್ಥನೆ ನಡೆಸಿ ಸಭೆಗೆ ಅಧ್ಯಾತ್ಮದ ಸ್ಪೂರ್ತಿಯನ್ನು ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈರಣ್ಣಾ ದೇಯಣ್ಣವರು ವಹಿಸಿದ್ದರು. ಸಂಗಮೇಶ ಅರಳಿ, ಲಿಂಗಾಯತ ಸಂಘಟನೆ ಪದಾಧಿಕಾರಿಗಳು ಸೇರಿದಂತೆ ಅನೇಕ ಶರಣಶರಣೆಯರು ಸತ್ಸಂಗದಲ್ಲಿ ಭಾಗವಹಿಸಿದರು.
ಲಿಂಗಾಯತ ಸಂಘಟನೆ ವತಿಯಿಂದ ದಾಸೋಹ ಸೇವೆ ಕೈಗೊಳ್ಳಲಾಯಿತು. ಹಲವಾರು ಸಾಧಕ, ಕಾರ್ಯಕರ್ತರು ಮತ್ತು ಮಹಿಳಾ ಶರಣಿಯರು ಹಾಜರಿದ್ದರು. ಮಹಾಂತೇಶ ಮೆಣಸಿನಕಾಯಿ, ಶೋಭಾ ದೇಯಣ್ಣವರ, ಲೀಲಾವತಿ ರಾಚೋಟಿಮಠ, ರಾಜಶ್ರೀ ಖನಗಣಿ, ಶೋಭಾ ಅಂಗಡಿ, ಶಾರದಾ ಹಿರೇಮಠ, ರತ್ನಾ ಬೆಣಚನಮರಡಿ, ಅನೀತಾ ಚೆಟ್ಟರ, ಮಂಗಳಾ ಕಾಗತಿಕರ, ಗುತ್ತಿಗೂಳಿ, ವಿದ್ಯಾ ಕರಕಿ ಮೊದಲಾದವರು ಉಪಸ್ಥಿತರಿದ್ದರು.
ಅಶೋಕ ಇಟಗಿ, ರಮೇಶ ಕಳಸಣ್ಣವರ, ಬಸವರಾಜ ಕರಡಿಮಠ, ಬಸವರಾಜ ಮತ್ತಿಕಟ್ಟಿ, ಆನಂದ ಕರಕಿ, ಬಸವರಾಜ ಬಿಜ್ಜರಗಿ, ಮತ್ತಿಕೂಪ್ಪ ದಂಪತಿಗಳು, ಶಿವಾನಂದ ನಾಯಕ, ಬಸವರಾಜ ಚೆಟ್ಟರ, ರಾಮಾಪೂರೆ ದಂಪತಿಗಳು, ಸೋಮು ಮಾವಿನಕಟ್ಟಿ ಹಾಗೂ ಇತರ ಶರಣರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದ ಸ್ವಾಗತವನ್ನು ಸುರೇಶ ನರಗುಂದ ನೀಡಿದರು. ನಿರೂಪಣೆಯನ್ನು ಸುಜಾತಾ ಮತ್ತಿಕಟ್ಟಿ ಸಮರ್ಥವಾಗಿ ನಿರ್ವಹಿಸಿದರು. ಶ್ವೇತಾ ಮುಂಗರವಾಡಿ ಶರಣು ಸಮರ್ಪಣೆ ಸಲ್ಲಿಸಿದರು.
ಸತ್ಸಂಗವು ಶ್ರಾವಣ ಮಾಸದ ಪವಿತ್ರತೆಗೆ ಸಾಕ್ಷಿಯಾಗಿ, ಆತ್ಮಶುದ್ಧಿಯ ಪರಿಕಲ್ಪನೆಯನ್ನು ವಿವರಿಸಿ ಶ್ರದ್ಧಾಭಕ್ತಿಯಿಂದಾಗಿ ಶ್ರೋತೃಗಳ ಮನಸ್ಸಿನಲ್ಲಿ ಆಳವಾದ ಪ್ರಭಾವ ಬೀರಿತು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143