ಯಮಕನಮರಡಿ :ಪ್ರಸ್ತಕ ಸಾಲಿನ (ಸಾಯಿ ಹಾಸ್ಟೆಲ್) ಭಾರತೀಯ ಕ್ರೀಡಾ ಪ್ರಾಧಿಕಾರ ಧಾರವಾಡ ಕ್ರೀಡಾ ವಸತಿ ನಿಲಯದಲ್ಲಿ ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.ಆಯ್ಕೆ ಪ್ರಕ್ರಿಯೆ ಫೆಬ್ರುವರಿ 10,11,12, ರಂದು ಧಾರವಾಡದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬಾಸ್ಕೆಟ್ ಬಾಲ್ ಆಯ್ಕೆಗೆ ಬರುವ ವಿದ್ಯಾರ್ಥಿಗಳ ವಯಸ್ಸು 13 ರಿಂದ 16 ವರ್ಷದವರ್ ಆಗಿರಬೇಕು ಹಾಗೂ ಎತ್ತರ:178 ಸೆಂ.ಮೀ. ಗಿಂತಲೂ ಹೆಚ್ಚುಕುಸ್ತಿ ಕ್ರೀಡೆಗೆ ಆಯ್ಕೆಯ ಕ್ರೀಡಾಪಟುಗಳು 13 ರಿಂದ 16 ವರ್ಷ ದೇಹದ ತೂಕ 40 ಕೆ. ಜಿ.ಗಿಂತಲೂ ಹೆಚ್ಚು ಇರಬೇಕು ಕಬ್ಬಡ್ಡಿ ಕ್ರೀಡೆಗೆ ಆಯ್ಕೆಗೆ ಬರುವ ವಿದ್ಯಾರ್ಥಿಗಳು 13 ರಿಂದ 15 ವರ್ಷ ವಯಸ್ಸು ಹಾಗೂ 16 ರಿಂದ 18 ವರ್ಷ ವಯಸ್ಸಿನ ವಿದ್ಯಾರ್ಥಿಗಳು ಆಗಿರಬೇಕು
ಆಯ್ಕೆಗೆ ಬರುವ ಕ್ರೀಡಾಪಟುಗಳು ಕನಿಷ್ಠ ಜಿಲ್ಲಾ ಮಟ್ಟದಲ್ಲಿ ಪದಕಗಳನ್ನು ಗೆದ್ದಿರಬೇಕು ಹಾಗೂ ಈ ಆಯ್ಕೆ ಬಾಲಕರಿಗೆ ಮಾತ್ರ ಇರುತ್ತದೆ ಆಯ್ಕೆಗೆ ಬರುವ ಸಂದರ್ಭದಲ್ಲಿ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಎಸ್ ಎಸ್ ಎಲ್ ಸಿ ಅಂಕಪಟ್ಟಿ, 4 ಭಾವಚಿತ್ರ, ಕ್ರೀಡಾಪಟುಗಳ ಆಟದ ಪ್ರಮಾಣ ಪತ್ರ, ವೈದ್ಯರ ಸದೃಢತೆ ಪ್ರಮಾಣ ಪತ್ರ, ಈ ದಾಖಲಾತಿಗಳನ್ನು ತರತಕ್ಕದ್ದು, ಹೆಚ್ಚಿನ ಮಾಹಿತಿಗಾಗಿ ರಂಗನಾಥ್, ಕಬ್ಬಡಿ ತರಬೇತಿದಾರರು 9740888020, ಕುಸ್ತಿ ತರಬೇತಿದಾರರು ಶಂಕರಯ್ಯ ಪೂಜಾರಿ 7019911347 ಸಂಪರ್ಕಿಸಬಹುದು.