ಉತ್ತರಖಂಡ: ಜುಲೈ 19, 2025 ರಂದು ಉತ್ತರಖಂಡ ರಾಜ್ಯದ ಪ್ರಸಿದ್ಧ ಶ್ರೀ ಕೇದಾರನಾಥ ದೇವಾಲಯಕ್ಕೆ ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿಯ ಸದಸ್ಯರು ಭೇಟಿ ನೀಡಿ, ದೇವಸ್ಥಾನದ ದರ್ಶನ ಪಡೆದು ಕನ್ನಡ ಪರಂಪರೆಯನ್ನು ಮುಂದುವರಿಸುತ್ತಿರುವ ಪ್ರಧಾನ ಅರ್ಚಕರನ್ನು ಗೌರವಿಸಿದರು.
ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಪರಂಪರೆಯನ್ನು 3,332 ವರ್ಷಗಳಿಂದ ಉಳಿಸಿಕೊಂಡು ಕಾಪಾಡುತ್ತಿರುವ ಪ್ರಧಾನ ಅರ್ಚಕರನ್ನು ಸಮಿತಿಯ ವತಿಯಿಂದ ಕನ್ನಡ ತಾಯಿ ಭಾವಚಿತ್ರವನ್ನು ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಅರ್ಚಕರು ಕರ್ನಾಟಕ ನಾಡು ಮತ್ತು ನುಡಿಯ ವೈಭವವನ್ನು ಹೊಗಳಿ, “ಕರ್ನಾಟಕದ ಸಂಸ್ಕೃತಿ, ಪರಂಪರೆ, ಭಾಷೆ ರಾಷ್ಟ್ರದ ವೈಭವದಲ್ಲಿ ವಿಶೇಷ ಸ್ಥಾನ ಹೊಂದಿದೆ. ಯಾದಗಿರಿಯ ಜಿಲ್ಲೆಯ ಯರಗೋಳ ಗ್ರಾಮೀಣ ಪ್ರದೇಶದಲ್ಲಿ ಮಾತ ಭುವನೇಶ್ವರಿ ಸೇವಾ ಸಮಿತಿಯು ಮಾಡಿದ ಮಾತ ಸ್ಥಾಪನೆ ಒಂದು ಅದ್ಭುತ ಸಾಧನೆ,” ಎಂದು ಶ್ಲಾಘಿಸಿದರು.
ಕನ್ನಡ ತಾಯಿ ಭುವನೇಶ್ವರಿ ಸೇವಾ ಸಮಿತಿಯ ಅಧ್ಯಕ್ಷರಾದ ಶಿವರಾಜ ಮನೆಗಾರ ಮತ್ತು ಸದಸ್ಯ ಮಹ್ಮದ್ ಪಾಠಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಮಿತಿಯ ಸದಸ್ಯರು ಕೇದಾರನಾಥದಲ್ಲಿ ಕನ್ನಡದ ವೈಭವವನ್ನು ಪ್ರತಿಬಿಂಬಿಸುವ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಮುಂಬರುವ ತಿಂಗಳಲ್ಲಿ ಯೋಜನೆ ರೂಪಿಸುವುದಾಗಿ ತಿಳಿಸಿದರು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143