ಬೆಳಗಾವಿ: ಇಲ್ಲಿನ ಮಹಾಂತೇಶ ನಗರದಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿಯ ಮಾಸಿಕ ಅನುಭಾವ ಗೋಷ್ಠಿ ಕಾರ್ಯಕ್ರಮ ಬುಧವಾರ ಮಹಾಂತ ಭವನದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯ ನಂತರ, ಕುಮಾರಿ ಶರಣೆ ಶಿವಲೀಲಾ ಅರಳಿಕಟ್ಟಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಶರಣರ ಏಕ ದೇವೋಪಾಸನೆ ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದ ಅವರು, ದೇವನೊಬ್ಬ ನಾಮ ಹಲವು ಎಂದು ಬಸವಣ್ಣವರು ಹೇಳಿದ್ದಾರೆ. ನಾವು ನಮ್ಮ ತಾಯಿಯನ್ನ ಹೇಗೆ ಹಲವಾರು ಹೆಸರಿನಿಂದ ಕರೆಯುತ್ತೇವೆ ಆದರೆ ಮೂಲ ತಾಯಿ ಎನ್ನುವ ಶಕ್ತಿ ಒಂದೇ ಎನ್ನುವ ಹಾಗೆ, ಅದೇ ರೀತಿ ದೇವರು ಒಬ್ಬನೇ ಅವನೇ ನಮ್ಮಲ್ಲಿನ ಅಂತರಂಗದ ಭಗವಂತ ಅವನಲ್ಲಿ ನಾವು ಧ್ಯೇಯ ಹಾಗೂ ಭಕ್ತಿಯಿಂದ ನಡೆದುಕೊಂಡರೆ ಮಾತ್ರ ಸಾಧನೆ, ಸಾರ್ಥಕತೆ ಸಾಧ್ಯ ಎಂದು ತಿಳಿಸಿದರು. ಜೊತೆಗೆ, ಲಿಂಗಾಯತ ಧರ್ಮ ಕೇವಲ ಪ್ರಮಾಣ ಪತ್ರಕ್ಕಾಗಿ ಅಲ್ಲ ಅದು ಆತ್ಮದಲ್ಲಿ ಬೆರೆತರೆ ಆವಾಗ ಲಿಂಗಾಯತರಾಗಿದ್ದು ಸಾರ್ಥಕ ಎಂದು ಹೇಳಿದರು.
ಈ ವೇಳೆ, ಪ.ಪೂ ಡಾ. ಅಲ್ಲಮ ಪ್ರಭು ಮಹಾ ಸ್ವಾಮಿಗಳು ರುದ್ರಾಕ್ಷಿ ಮಠ ನಾಗನೂರು – ಬೆಳಗಾವಿ, ಶರಣೆ ಶಿವಲೀಲಾ ಅರಳಿಕಟ್ಟಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ, ಶ್ರೀಮತಿ ಪ್ರೇಮಕ್ಕ ಅಂಗಡಿ ಅಧ್ಯಕ್ಷರು, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಜಿಲ್ಲಾ ಘಟಕ ಬೆಳಗಾವಿ, ಶ್ರೀಮತಿ ಸಂಗೀತಾ ಮುರುಗೇಶ ಶಿವಪೂಜಿ ಹಾಗೂ ಮುರುಗೇಶ ಬಾಬುರಾವ್ ಶಿವಪೂಜಿ ದಂಪತಿ, ಶ್ರೀಮತಿ ವಿದ್ಯಾ ಗೌಡರ, ಶ್ರೀಮತಿ ದಾಕ್ಷಾಯಿಣಿ ಹೂಗಾರ, ಶ್ರೀಮತಿ ಮಹಾನಂದ ಪರುಶೆಟ್ಟಿ ಹಾಗೂ ಎಲ್ಲ ಶರಣ – ಶರಣೆಯರು ಉಪಸ್ಥಿತರಿದ್ದರು.