Live Stream

[ytplayer id=’22727′]

| Latest Version 8.0.1 |

Local NewsState News

ದಿ.ಶ್ರೀಮತಿ ಶಾಂತಾದೇವಿ ಮಹಾಲಿಂಗಪ್ಪ ಬಣಕಾರ ದತ್ತಿ ಕಾರ್ಯಕ್ರಮ “ವಿಜ್ಞಾನ ಉಪನ್ಯಾಸ” ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ದಿ.ಶ್ರೀಮತಿ ಶಾಂತಾದೇವಿ ಮಹಾಲಿಂಗಪ್ಪ ಬಣಕಾರ ದತ್ತಿ ಕಾರ್ಯಕ್ರಮ “ವಿಜ್ಞಾನ ಉಪನ್ಯಾಸ” ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಬೈಲಹೊಂಗಲ: ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲೆಯ, ದಿ.ಶ್ರೀಮತಿ ಶಾಂತಾದೇವಿ ಮಹಾಲಿಂಗಪ್ಪ ಬಣಕಾರ ದತ್ತಿ ಕಾರ್ಯಕ್ರಮ ನಿಮಿತ್ಯ “ವಿಜ್ಞಾನ ಉಪನ್ಯಾಸ” ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಂಗಳವಾರ ದಿ:೦೪/೦೩/೨೦೨೫ ರಂದು, ಮಧ್ಯಾಹ್ನ ೦೩:೦೦ಕ್ಕೆ, ಸ್ಥಳ: ಸರಕಾರಿ ಪ್ರೌಢಶಾಲೆ ರಾಮತೀರ್ಥ ನಗರ ಬೆಳಗಾವಿಯಲ್ಲಿ ನಡೆಯಲಿದೆ.

ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಡಾ.ರಾಜಶೇಖರ ಚಳಗೇರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕ.ಸಾ.ಪ. ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ. ಮಂಗಲಾ ಶ್ರೀ. ಮೆಟಗುಡ್ಡ ಅವರು ಆಶಯನುಡಿಗಳನ್ನಾಡಲಿದ್ದಾರೆ. ಕೆ.ಎಲ್.ಇ. ಬೆಳಗಾವಿಯ ಖ್ಯಾತ ವೈದ್ಯರು ಡಾ. ಸಂಗಮೇಶ ಕತ್ತಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ. ಬೆಳಗಾವಿಯ ಖ್ಯಾತ ವೈದ್ಯರು ಡಾ.ವನಿತಾ ಬ ಮೆಟಗುಡ್ಡ ಎಮ್.ಡಿ.,ಡಿ.ಜಿ.ಒ,ಎಫ್.ಆಯ್.ಸಿ.ಒ.ಜೆ “ಪ್ರೌಢಾವಸ್ಥೆಯ ಬೆಳವಣಿಗೆ ಮತ್ತು ದೈಹಿಕ ವೈಪರಿತ್ಯಗಳು” ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಸರಕಾರಿ ಪ್ರೌಢಶಾಲೆಯ ವಿಧ್ಯಾರ್ಥಿನಿಯರು ನಾಡಗೀತೆಯನ್ನು ಪ್ರಸ್ತುತ ಪಡಿಸಲಿದ್ದಾರೆ. ವೀ.ಎಂ.ಅoಗಡಿ ಅವರು ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ಡಾ.ಭಾರತಿ ಮಠದ ಅವರು ದತ್ತಿ ಪರಿಚಯವನ್ನು ಮಾಡಲಿದ್ದಾರೆ. ಶ್ರೀ.ಸಿ.ವೈ.ಮೆಣಸಿನಕಾಯಿ ಅವರು ರಚಿಸಿದ “ಭೋಜರಾಜನ ಪುನರ್ ಜನ್ಮ ಮತ್ತಿತರ ಕಥೆಗಳು ಕಥಾ ಸಂಕಲನ ಕೃತಿ ಮತ್ತು ಲಕ್ಷö್ಮಣ ಡೊಂಬರ ಅವರು ರಚಿಸಿದ “ಈ ಸ್ನೇಹ ಬಂಧನ” ಎಂಬ ಕೃತಿಗಳಿಗೆ ದಿ.ಶ್ರೀಮತಿ ಶಾಂತಾದೇವಿ ಮಹಾಲಿಂಗಪ್ಪ ಬಣಕಾರ ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.

ಕ.ಸಾ.ಪ.ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಾ ಅಧ್ಯಕ್ಷರುಗಳು, ಜಿಲ್ಲಾ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಸಾಹಿತಿಗಳು, ಕಲಾವಿದರು, ಕಸಾಪ ಸರ್ವ ಸದಸ್ಯರು ಮತ್ತು ಸಮಸ್ತ ಕನ್ನಡ ಮನಸ್ಸುಗಳು ಎಲ್ಲರೂ ತಪ್ಪದೇ ಆಗಮಿಸಿ ಶೋಭೆ ತರಬೇಕೆಂದು ಕಸಾಪ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ.ಮಂಗಲಾ ಶ್ರೀ ಮೆಟಗುಡ್ಡ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";