ಯಮಕನಮರಡಿ: ಹುಕ್ಕೇರಿ ತಾಲೂಕಿನ ಯರಗಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲಿನ ಹಿರಿಯ ನಿವೃತ್ತ ಮುಖ್ಯ ಶಿಕ್ಷಕರಾದ ಹಾಗೂ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಎಸ್.ಎ. ಸರಿಕರ ಅವರನ್ನು ರಾಜ್ಯಮಟ್ಟದ “ಸೇವಾ ರತ್ನ” ಪ್ರಶಸ್ತಿಯಿಂದ ಸಮರ್ಪಕವಾಗಿ ಗೌರವಿಸಲಾಗಿದೆ.
ಈ ಗೌರವವನ್ನು ಕಲಾ ಕೌಸ್ರುಭ ಸಂಸ್ಥೆ ದಾಂಡೇಲಿ ಹಾಗೂ ದಿ. ಪೈದಸ್ಟಾರ ಅಸೋಸಿಯೇಶನ್, ಯರಗಟ್ಟಿ ಇವರ ಸಹಯೋಗದೊಂದಿಗೆ ಇತ್ತೀಚೆಗೆ ಸಂಕೇಶ್ವರದ ಲೀಲಾ ಲಾನ್ಸ್ ಸೋಸರಿ ಗಾರ್ಡನ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದಲ್ಲದೇ, ನಿವೃತ್ತಿಯ ನಂತರವೂ ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ಚುರುಕಾಗಿ ತೊಡಗಿಸಿಕೊಂಡಿರುವ ಎಸ್.ಎ. ಸರಿಕರ ಅವರ ನಿಷ್ಠೆ, ಸಮರ್ಪಣೆ ಮತ್ತು ಸೇವಾ ಮನೋಭಾವನೆಗೆ ಈ ಪ್ರಶಸ್ತಿ ಗೌರವವಾಗಿದೆ.
ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಅವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು, ಈ ಗೌರವ ಸಮಾರಂಭದ ಮೂಲಕ ಸಮಾಜದ ಆಧಾರಸ್ತಂಭರಾಗಿರುವ ಶಿಕ್ಷಕರಿಗೆ ಬೇಕಾದ ಪ್ರೇರಣೆಯ ಉದಾಹರಣೆ ಸ್ಥಾಪನೆಯಾಗಿದೆ.
ಎಸ್.ಎ. ಸರಿಕರ ಅವರಿಗೆ ನಮ್ಮೂರ ಧ್ವನಿ ಸುದ್ದಿ ವಾಹಿನಿಯ ಕಡೆಯಿಂದ ಹೃತ್ಪೂರ್ವಕ ಅಭಿನಂದನೆಗಳು.
ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143