Live Stream

[ytplayer id=’22727′]

| Latest Version 8.0.1 |

State News

ಡ್ಯಾಮ್ ಮೇಲಿಂದ ಬಿದ್ದು ಯುಕನ ದುರಂತ ಅಂತ್ಯ, ಮೋಜು ತಂದ ಕುತ್ತು.

ಡ್ಯಾಮ್ ಮೇಲಿಂದ ಬಿದ್ದು ಯುಕನ ದುರಂತ ಅಂತ್ಯ, ಮೋಜು ತಂದ ಕುತ್ತು.

78ನೇ ಸ್ವಾತಂತ್ರ್ಯ ದಿನಾಚರಣೆ ದಿನದಂದು ಸಾರ್ವಜನಿಕ ರಜೆ ಜೊತೆಗೆ ಆ ಸಂದರ್ಭದಲ್ಲಿ ವಾರಾಂತ್ಯವೂ ಬಂದ ಕಾರಣ ಪ್ರವಾಸಿ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಇಂತಹ ವೇಳೆ ಕೆಲವರು ಹುಚ್ಚಾಟ ಮೆರೆಯಲು ಹೋಗಿ ದುರಂತ ತಂದುಕೊಂಡಿದ್ದಾರೆ. ಅಂತಹ ಘಟನೆಯೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಉಂಬ್ರೇಡ್ ನಗರದ ಬಳಿ ಇರುವ ಮಕರ್ಧೊಕುಡ ಜಲಾಶಯದಲ್ಲಿ ಈ ಘಟನೆ ನಡೆದಿದ್ದು, ಆಗಸ್ಟ್ 15 ರಂದು ಜಲಾಶಯ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಮೂವರು ಯುವಕರು ಡ್ಯಾಮ್ ಮೇಲೆ ಹೋಗಿ ಸ್ಟಂಟ್ ಮಾಡಲು ಮುಂದಾಗಿದ್ದಾರೆ.

ಓರ್ವ ಮೇಲೆ ಹತ್ತಲು ಯಶಸ್ವಿಯಾಗಿದ್ದು, ಇನ್ನಿಬ್ಬರು ಆತನನ್ನು ಕೆಳಗೆ ತರಲು ಪ್ರಯತ್ನಿಸಿದ್ದಾರೆ. ಆದರೆ ಅದಕ್ಕೆ ನಿರಾಕರಿಸಿದ ಆತ ಕೈ ಮೇಲೆತ್ತಿ ಸಾರ್ವಜನಿಕರ ಕಡೆ ವೇವ್ ಮಾಡಿದ್ದು, ಇದೇ ಸಂದರ್ಭದಲ್ಲಿ ಆತನ ಇಬ್ಬರು ಸ್ನೇಹಿತರು ಕೆಳಗೆ ಬಿದ್ದಿದ್ದಾರೆ. ಆದರೆ ವೇವ್ ಮಾಡುತ್ತಿದ್ದ ಅವರ ಸ್ನೇಹಿತ ನೇರವಾಗಿ ಜಲಾಶಯಕ್ಕೆ ಬಿದ್ದಿದ್ದಾನೆ. ಕಿಕ್ಕಿರಿದಿದ್ದ ಸಾರ್ವಜನಿಕರು ಈ ದೃಶ್ಯವನ್ನು ಅಸಹಾಯಕರಾಗಿ ನೋಡಿದ್ದು ಜಲಾಶಯಕ್ಕೆ ಬಿದ್ದ ಯುವಕನ ನೆರವಿಗೆ ಧಾವಿಸಲು ಸಾಧ್ಯವಾಗಲಿಲ್ಲ. ಸದ್ಯ ಈ ದುರಂತದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಡೆ ವೈರಲ್ ಆಗಿದೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";