ಹುಕ್ಕೇರಿ: ಪಟ್ಟಣದಲ್ಲಿ ಹೊರವಲಯದ ಕ್ಯಾರಗುಡ್ಡದ ಅವಜಿಕರ ಆಶ್ರಯದಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು ದೆಹಲಿಗೆ ಹೋಗುತ್ತೇವೆ ಎಂದು ನಾನು ಹೇಳಿಯೇ ಇಲ್ಲ ದೆಹಲಿಗೆ ಹೋಗುವದು ನನಗೆ ಗೊತ್ತಿಲ್ಲ ಎಂದರು.
ದಲಿತ ಸಚಿವರಿಂದ ದೆಹಲಿ ಭೇಟಿ ವಿಚಾರವಾಗಿ ದೆಹಲಿಗೆ ಹೋಗುವ ಯಾವುದೇ ಪ್ಲಾನ್ ಇಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ನೀಡಿದರು.
ಡಿಕೆ ಶಿವಕುಮಾರ ಮಹಾಕುಂಭ ಮೇಳದಲ್ಲಿ ಭಾಗಿಯಾಗಿದ್ದಾರೆ ನೀವು ಹೋಗತೀರಾ ಎನ್ನುವ ಪ್ರಶ್ನೆಗೆ ನಾನು ಪ್ರಯಾಗರಾಜ್ ಗೆ ಹೋಗುವದಿಲ್ಲ ಇಲ್ಲೆ ಇರುವ ಕೃಷ್ಣಾ, ಹೀರಣ್ಯಕೇಶಿ ನದಿಗಳಲ್ಲೆ ಸ್ನಾನ ಮಾಡುತ್ತೇನೆ ಎಂದ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ವರದಿ:ಕಲ್ಲಪ್ಪ ಪಾಮನಾಯಿಕ್