Live Stream

[ytplayer id=’22727′]

| Latest Version 8.0.1 |

National NewsState News

ಹಾರ್ಟ್ ಅಟ್ಯಾಕ್ ಆಗುವ ಮುಂಚೆ ಪ್ರತಿಯೊಬ್ಬರಲ್ಲಿಯೂ ಕಾಣಿಸಿಕೊಳ್ಳುತ್ತದೆ ಈ ಲಕ್ಷಣಗಳು…!

ಹಾರ್ಟ್ ಅಟ್ಯಾಕ್ ಆಗುವ ಮುಂಚೆ ಪ್ರತಿಯೊಬ್ಬರಲ್ಲಿಯೂ ಕಾಣಿಸಿಕೊಳ್ಳುತ್ತದೆ ಈ ಲಕ್ಷಣಗಳು…!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ರಪಂಚದಾದ್ಯಂತ ಅಕಾಲಿಕ ಮರಣಗಳಿಗೆ ಹೃದಯಾಘಾತ ಕಾರಣವಾಗಿದೆ. ಹೃದಯಾಘಾತವನ್ನು ತಡೆಗಟ್ಟಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೂ ಸಹ ದಿನೇ ದಿನೇ ಹೃದಯಾಘಾತದ ಸಮಸ್ಯೆ ಹಾಗೂ ಪ್ರಾಣಾಪಾಯ ಸಂಭವಿಸುತ್ತಿರುವುದನ್ನು ನಾವು ಕಾಣಬಹುದು.

ಆದರೆ ಈಗ ನಾವು ದೇಹದಲ್ಲಿ ಆಗುವ ಬದಲಾವಣೆಗಳಿಂದ ಹೃದಯಾಘಾತದ ಅಪಾಯವನ್ನು ಅರ್ಥಮಾಡಿಕೊಳ್ಳಬಹುದು. ಆದರೂ ಜನರು ದೇಹ ನೀಡುವ ಈ ಸಂಕೇತಗಳನ್ನು ಮಾಮೂಲಿ ಎಂದು ನಿರ್ಲಕ್ಷಿಸುತ್ತಾರೆ. ಈ ನಿರ್ಲಕ್ಷ್ಯವೇ ಅವರ ಪ್ರಾಣಕ್ಕೆ ಮುಳ್ಳಾಗಬಹುದು.

ಹೃದಯಾಘಾತಕ್ಕೆ 48 ಗಂಟೆಗಳ ಮೊದಲು ಕಾಣಿಸುವ ಈ ಲಕ್ಷಣಗಳು:

  • ಎದೆಯಲ್ಲಿ ತೀವ್ರವಾದ ನೋವು ಮತ್ತು ಒತ್ತಡದ ಅನುಭವವು ಹೃದಯಾಘಾತದ ಮುನ್ಸೂಚನೆಯಾಗಿದೆ.
  • ಎದೆ ಭಾರವಾದಂತೆ ಅನಿಸುವುದು, ಎದೆಯಲ್ಲಿ ಸುಡುವ ಅನುಭವ ಕೂಡಾ ಹೃದಯಾಘಾತದ ಲಕ್ಷಣವಾಗಿದೆ.
  • ಯಾವಾಗಲೂ ದಣಿವಾಗುತ್ತಿರುವುದು, ದೇಹದ ವಿಪರೀತ ದೌರ್ಬಲ್ಯ ಭಾವನೆಯು ಹೃದಯಾಘಾತದ ಲಕ್ಷಣವಾಗಿರಬಹುದು.
  • ಸಣ್ಣ ಕೆಲಸಗಳನ್ನು ಮಾಡಿದರೂ ಅಥವಾ ಏನೂ ಕೆಲಸ ಮಾಡದೇ ಇದ್ದರೂ ಉಸಿರಾಟದ ತೊಂದರೆಯಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನಿರಂತರವಾಗಿ ಮತ್ತು ಪದೇ ಪದೇ ಈ ರೀತಿ ಆಗುತ್ತಿದ್ದರೆ ಅದರ ಬಗ್ಗೆ ಗಮನ ಹರಿಸಬೇಕು.
  • ಹೃದಯಾಘಾತಕ್ಕೂ ಮುನ್ನ, ಎಡಗೈ ಮತ್ತು ಬೆನ್ನಿನ ಎಡಭಾಗದಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳಬಹುದು. ಹೀಗಾತಡ ಮಾಡದೇ ವೈದ್ಯರನ್ನು ಸಂಪರ್ಕಿಸಿ.
  • ಅತಿಯಾದ ಬೆವರು ಶೀತ ದಿನಗಳಲ್ಲಿ ಅಥವಾ ರಾತ್ರಿಯಲ್ಲಿ ಬೆವರುವುದು ಹೃದಯ ಸಂಬಂಧಿತ ಸಮಸ್ಯೆಯಾಗಿರಬಹುದು. ಇದು ಹೃದಯಾಘಾತದ ಪೂರ್ವಗಾಮಿ ಲಕ್ಷಣವೂ ಆಗಿರಬಹುದು.

(ಸೂಚನೆ: ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ನೀಡಲಾಗಿದೆ. ನಮ್ಮೂರ ಧ್ವನಿ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.)

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";