ದಾವಣಗೆರೆ: ಜಿಲ್ಲೆಯ ಕೆರೆಬಿಲ್ಚಿ ಚನ್ನಗಿರಿ ತಾಲೂಕಿನ ಸುಳೆಕೆರೆಯಲ್ಲಿದೆ. 10ನೇ ಶತಮಾನದಲ್ಲಿ (1128ರಲ್ಲಿ) ಕೇವಲ 3 ವರ್ಷದಲ್ಲಿ ಈ ಕೆರೆ ನಿರ್ಮಾಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ. ಅವಳು ಸ್ವರ್ಣವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು. ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದರ್ವ ವಿವಾಹ ಆಗುತ್ತಾಳೆ. ಆದ್ರೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಅವಳನ್ನ ಮೂದಲಿಸುತ್ತಾರಂತೆ. ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆಯನ್ನು ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ, ಕೆರೆಗೆ ಹಾರವಾದಳೆಂಬ ಇತಿಹಾಸ ಇದೆ. ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ. ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.
ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ. ಈ ಹೆಸರು ಬದಲಿಸಿ ಶಾಂತವ್ವಳ ಸ್ಮಾರಕವಾಗಿ ಶಾಂತಿ ಸಾಗರ ಎಂದೂ ಕರೆಯುತ್ತಾರೆ. ಏಷ್ಯಾದಲ್ಲಿನ ಅಸ್ಸಾಂನ ಸಿಬಾ ಸಾಗರ ಅತಿ ದೊಡ್ಡ ಕೆರೆಯ ನಂತರ ಎರಡನೇ ಅತಿ ದೊಡ್ಡಕೆರೆ ಇದು. ಅಂದಾಜು 30 ಕಿ.ಮಿ. ಸುತ್ತಳತೆಯಲ್ಲಿ 6550 ಎಕರೆ ಪ್ರದೇಶದಲ್ಲಿ ಶೇಖರವಾಗುವ ನೀರು, 9 ರಿಂದ ಗರಿಷ್ಟ 27 ಅಡಿ ಆಳವಿದೆ, 70 ಕಿ.ಮಿ ದೂರದ ಚಿತ್ರದುಗ೯ ಪಟ್ಟಣ ಮತ್ತು 110 ಕಿ.ಮಿ ದೂರದ ಜಗಳೂರು ಪಟ್ಟಣ ಸೇರಿದಂತೆ ಸುಮಾರು 50 ಹಳ್ಳಿಗೆ ಇದು ಕುಡಿಯುವ ನೀರಿನ ಮೂಲವಾಗಿದೆ ಹಾಗೂ ಸುಮಾರು 400 ಎಕರೆ ಕೃಷಿಗೆ ಉಪಯೋಗ ಆಗುತ್ತಿದೆ. 800 ವಷ೯ದ ಹಿಂದೆ ನಿರ್ಮಿಸಿರುವ ಇದರ ನೀರಿನ ಸುಂದರ ತೂಬು ಈಗಲೂ ಸ್ವಲ್ಪವೂ ಹಾಳಾಗದೇ ಇರುವುದು ಅವತ್ತಿನ ಗುಣಮಟ್ಟದ ನಿರ್ಮಾಣ ಮತ್ತು ಇಂಜಿನಿಯರಿಂಗ್ ಕೌಶಲ್ಯವಾಗಿದೆ.
ಪ್ರೇಮ ವಿವಾಹ, ಅಂತರ್ ಜಾತಿ ವಿವಾಹ ಆ ಕಾಲದಲ್ಲಿ ಎಷ್ಟು ಜನ ವಿರೋಧಿ ಆಗಿತ್ತು ಎಂಬುದಕ್ಕೆ ಇದೊಂದು ಉದಾಹರಣೆ. ಕೆಳದಿ ಅರಸರಲ್ಲಿ ದೀರ್ಘ ಕಾಲ ಮತ್ತು ಅತ್ಯುತ್ತಮ ಆಡಳಿತ ಮಾಡಿದ ರಾಜಾ ವೆಂಕಟಪ್ಪ ನಾಯಕ ಚಂಪಕ ಎಂಬ ಸುಂದರಿಯನ್ನ ಅವಳು ಬಿಡಿಸುತ್ತಿದ್ದ ನಿತ್ಯ ರಂಗೋಲಿಯಿಂದ ಆಕರ್ಷಿತನಾಗಿ ಪ್ರೇಮಿಸಿ ಮದುವೆ ಆದ್ದರಿಂದ ಚಂಪಕಳನ್ನು ಸೂಳೆ ಎಂದು ಕರೆಯುತ್ತಾರೆ ಮತ್ತು ಈ ಅಂತರ್ ಜಾತಿ ವಿವಾಹದ ಕಾರಣದಿಂದ ಕೆಳದಿ ಅರಸರ ಚರಿತ್ರೆಯಲ್ಲಿ ರಾಜಾ ವೆಂಕಟಪ್ಪ ನಾಯಕರನ್ನ ವಿಜೃಂಬಿಸದOತೆ ಮಾಡಿದ್ದಾರೆ. ಇದು ಸಹ ಸೂಳೆಕೆರೆಯ ಹಾಗೆ ಇನ್ನೊಂದು ನಿದರ್ಶನ.
ತಮ್ಮ ಬಿಡುವಿನ ವೇಳೆಯಲ್ಲಿ ನಮ್ಮ ಕರ್ನಾಟಕದ ವಿಶೇಷ ಹಾಗೂ ಐತಿಹಾಸಿಕ ಸ್ಥಳಗಳಿಗೆ ಕುಟುಂಬದ ಜೊತೆಗೆ ಹೋಗಲು ಹೇಳಿ ಮಾಡಿಸಿದ ಸ್ಥಳ.
ಸಮಸ್ತ ನಾಡಿನ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️