Live Stream

[ytplayer id=’22727′]

| Latest Version 8.0.1 |

National NewsState News

ಟೆರರ್ ವೈದ್ಯ ಗ್ಯಾಂಗ್ ನಿಂದ ಭಾರತವನ್ನು ರಕ್ಷಿಸಿದ ಐಪಿಎಸ್ ಅಧಿಕಾರಿಯ ಕಥೆ

ಟೆರರ್ ವೈದ್ಯ ಗ್ಯಾಂಗ್ ನಿಂದ ಭಾರತವನ್ನು ರಕ್ಷಿಸಿದ ಐಪಿಎಸ್ ಅಧಿಕಾರಿಯ ಕಥೆ

ನವದೆಹಲಿ: ದೆಹಲಿಯಲ್ಲಿ ಸಂಭವಿಸಬೇಕಿದ್ದ ಭಯಾನಕ ಬಾಂಬ್ ಸ್ಫೋಟಕ್ಕೂ ಕೆಲವೇ ಕ್ಷಣಗಳ ಮೊದಲು, ಪೊಲೀಸರು “ಟೆರರ್ ವೈದ್ಯ ಗ್ಯಾಂಗ್” ಎಂಬ ಉಗ್ರರನ್ನು ಬಂಧಿಸಿ ದೇಶವನ್ನು ದೊಡ್ಡ ಅನಾಹುತದಿಂದ ಉಳಿಸಿದರು. ಈ ಯಶಸ್ವಿ ಕಾರ್ಯಾಚರಣೆಯ ಹಿಂದಿನ ಪ್ರಮುಖ ಶಕ್ತಿ ಎಂದರೆ ಐಪಿಎಸ್ ಡಾ. ಜಿ.ವಿ. ಸಂದೀಪ್ ಚಕ್ರವರ್ತಿ.

2014ರ ಬ್ಯಾಚ್‌ನ ಈ ಐಪಿಎಸ್ ಅಧಿಕಾರಿ ಪ್ರಸ್ತುತ ಶ್ರೀನಗರದ ಎಸ್‌ಎಸ್‌ಪಿ ಆಗಿದ್ದು, ಅಂದಿನ ಅನಂತನಾಗ್ ಜಿಲ್ಲೆಯ ನೌಗಾಮ್ ಪ್ರದೇಶದಲ್ಲಿ ಅವರ ಕಣ್ಣಿಗೆ ಕೆಲವು ಸಂಶಯಾಸ್ಪದ ಪೋಸ್ಟರ್‌ಗಳು ಬೀಳುತ್ತವೆ.

ಆ ಪೋಸ್ಟರ್‌ಗಳಲ್ಲಿ ಜನರನ್ನು “ಜೈಶ್-ಎ-ಮೋಹಮ್ಮದ್” ಸಂಘಟನೆಯತ್ತ ಸೆಳೆಯುವಂತಹ ಪ್ರಚೋದನಕಾರಿ ವಿಷಯಗಳು ಇದ್ದವು. ಇವು ಸಾಮಾನ್ಯವಾಗಿ ಯಾರೂ ಕಡೆಗಣಿಸಬಹುದಾದವು. ಆದರೆ ಡಾ. ಸಂದೀಪ್ ಚಕ್ರವರ್ತಿ ಅದನ್ನು ತೀವ್ರವಾಗಿ ಗಮನಿಸಿ ತನಿಖೆ ಆರಂಭಿಸಿದರು.

ಅವರು ಸುಮ್ಮನೆ ನೋಡುತ್ತಿರಲಿಲ್ಲ — ಆ ಪೋಸ್ಟರ್‌ಗಳ ಹಿಂದಿರುವವರ ಪತ್ತೆಗೆ ಅವರು ತಾವುಲೇ ತಂಡವನ್ನು ನೇತೃತ್ವ ವಹಿಸಿ ಕಾರ್ಯಾಚರಣೆಗೆ ಇಳಿದರು. ಈ ತನಿಖೆಯ ಫಲವಾಗಿ “ವೈದ್ಯರ ವೇಷದಲ್ಲಿದ್ದ ಉಗ್ರರ ಜಾಲ” ಬಯಲಾಯಿತು. ತನಿಖೆ ಮುಂದುವರಿದಂತೆ, ಈ ಗ್ಯಾಂಗ್ ದೇಶದೊಳಗೇ ವಿಧ್ವಂಸಕ ಚಟುವಟಿಕೆಗಳಿಗೆ ತಯಾರಾಗಿದ್ದರೆಂಬ ಸತ್ಯ ಹೊರಬಂದಿತು.

ಪೊಲೀಸರು ಆಪರೇಷನ್ ವೇಳೆ ಸುಮಾರು 2,900 ಕಿಲೋಗ್ರಾಂ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡರು — ಅಂದರೆ ಒಂದೇ ಸಮಯದಲ್ಲಿ ಹಲವಾರು ಪ್ರಮುಖ ನಗರಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಬಹುದಾದ ಪ್ರಮಾಣ!

ಒಂದು ವೇಳೆ ಡಾ. ಸಂದೀಪ್ ಚಕ್ರವರ್ತಿ ಅವರು ಆ ಕರಪತ್ರಗಳನ್ನು ಕಡೆಗಣಿಸಿದ್ದರೆ, ದೇಶದ ಹಲವಾರು ಪ್ರದೇಶಗಳಲ್ಲಿ ಅಣಕಿಸಲಾರದ ಮಟ್ಟದ ದುರಂತ ಸಂಭವಿಸಬಹುದಾಗಿತ್ತು. ಅವರ ಕರ್ತವ್ಯನಿಷ್ಠೆ, ತ್ವರಿತ ನಿರ್ಧಾರಶಕ್ತಿ ಮತ್ತು ರಾಷ್ಟ್ರಭಕ್ತಿ ದೇಶವನ್ನು ದೊಡ್ಡ ಅಪಾಯದಿಂದ ರಕ್ಷಿಸಿತು.

ಇಂದಿನ ಯುವ ಐಪಿಎಸ್ ಅಧಿಕಾರಿಗಳಿಗೆ ಡಾ. ಜಿ.ವಿ. ಸಂದೀಪ್ ಚಕ್ರವರ್ತಿ ಅವರ ಕಥೆ ಪ್ರೇರಣೆಯಾದ ಉದಾಹರಣೆ — ಒಬ್ಬ ಅಧಿಕಾರಿ ಎಚ್ಚರಿಕೆಯಿಂದಿದ್ದರೆ ಒಂದು ದೇಶ ಸುರಕ್ಷಿತವಾಗಿರಬಹುದು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";