ಬೆಳಗಾವಿ, ಫೆ.12: ಇತ್ತೀಚೆಗೆ ಜರುಗಿದ ಪ್ರಸಕ್ತ ಸಾಲಿನ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಬೆಳಗಾವಿಯ ಜೈನ ಶಿಕ್ಷಣ ಸಮೂಹ ಸಂಸ್ಥೆಯ ( ಜೆಜಿಐ)ಯ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯ ಅಂಕಗಳ ಪಡೆದು ಸಾಧನೆ ಮೆರೆದಿದ್ದಾರೆ.ಆದಿತ್ಯ ಶಿಂಗನಮಕ್ಕೆ ಶೇಕಡಾ 99.45 ಅಂಕ ಪಡೆದರೆ, ಶೇ 95.60 ಅಮೈ ಸತೀಶ್ ಅಂಗಡಿ ಹಾಗೂ ಶೇ. 95.25 ರೋನಕ ವಿಕಾಸ ಮೇಹ್ತಾ ಅಂಕ ಪಡೆದು ಅತ್ಯುನ್ನತ ಶ್ರೇಣಿ ಪಡೆದುಕೊಂಡಿದ್ದಾರೆ.ವಿದ್ಯಾರ್ಥಿಗಳ ಮಹತ್ತರ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಜೆಜಿಐ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿ ಅಭಿನಂದಿಸಿ, ಭಾವಿ ಅಧ್ಯಯನಕ್ಕೆ ಶುಭ ಕೋರಿದ್ದಾರೆ
Nammur Dhwani > Local News > ಜೈನ ಕಾಲೇಜಿನ ಮೂವರು ವಿದ್ಯಾರ್ಥಿಗಳು ಜೆಇಇ ಯಲ್ಲಿ ಅತ್ಯುತ್ತಮ ಸಾಧನೆ