
ಖಾನಾಪುರ: ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ದೇವಲತ್ತಿ ವಲಯಮಟ್ಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಹನಿವೆಲ್ ಇಂಟರ್ನೆಷನಲ್ ಸ್ಕೂಲ್‌ನ ಅಧ್ಯಕ್ಷರೂ ಹಾಗೂ ಉದ್ಯಮಿಗಳಾದ ಶುಭಾಸ್ ಗುಳಶೆಟ್ಟಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜಮುಖಿ ಅನೇಕ ಉತ್ತಮ ಕಾರ್ಯಗಳು ನಡೆಯುತ್ತಿದ್ದು, ತಾನು ಧರ್ಮಸ್ಥಳ ಕ್ಷೇತ್ರದ ಸದ್ಭಕ್ತನಾಗಿ ಈ ಎಲ್ಲ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುತ್ತಿರುವುದಾಗಿ ಹೇಳಿದರು. ಯೋಜನೆಯ ಸೌಲಭ್ಯಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕಾರ್ಯಾಗಾರದಲ್ಲಿ ಯೋಜನಾಧಿಕಾರಿಗಳಾದ ಗಣಪತಿ ನಾಯ್ಕ್ ಅವರು ಹಾಜರಿದ್ದ ಒಕ್ಕೂಟಗಳ ಪದಾಧಿಕಾರಿಗಳಿಗೆ ಯೋಜನೆಯ ವಿವಿಧ ಕಾರ್ಯಕ್ರಮಗಳು ಹಾಗೂ ಪದಾಧಿಕಾರಿಗಳ ಜವಾಬ್ದಾರಿಗಳ ಕುರಿತು ವಿವರವಾದ ಮಾಹಿತಿ ನೀಡಿದರು.
ಮುಖ್ಯವಾಗಿ ಸುಜ್ಞಾನನಿಧಿ ಶಿಷ್ಯವೇತನ, ನಿರ್ಗತಿಕರ ಮಾಸಾಶನ, ವಾತ್ಸಲ್ಯ ಮನೆ ನಿರ್ಮಾಣ, ಶಾಲೆಗಳಿಗೆ ಡೆಸ್ಕ್–ಬೆಂಚ್ ವಿತರಣೆ, ಟ್ಯೂಷನ್ ತರಗತಿಗಳು, ದೇವಾಲಯ ಕಟ್ಟಡಗಳಿಗೆ ಅನುದಾನ, ಕೆರೆ ಹೂಳೆತ್ತುವಿಕೆ, ಸ್ವ ಉದ್ಯೋಗ ತರಬೇತಿಗಳು, ಜನಮಂಗಲ ಯೋಜನೆಯಡಿ ಸಲಕರಣೆ ವಿತರಣೆ, ಪರಿಸರ ಕಾರ್ಯಕ್ರಮಗಳು, ಶಾಲಾ ಮಕ್ಕಳಿಗಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ, ಮದ್ಯವರ್ಜನಾ ಶಿಬಿರಗಳು ಸೇರಿದಂತೆ ಹಲವಾರು ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ PKPS ನಿರ್ದೇಶಕರಾದ ಶಿವಾನಂದ ಪಾಟೀಲ್, ಮೇಲ್ವಿಚಾರಕರಾದ ಯದುನಂದ ಎಲ್., ಆಂತರಿಕ ಲೆಕ್ಕಪರಿಶೋಧಕರಾದ ಭುಜಂಗ್ ಎಚ್.ಬಿ., ವಲಯದ ಸೇವಾಪ್ರತಿನಿಧಿಗಳು ಹಾಗೂ ವಿವಿಧ ಒಕ್ಕೂಟಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರೇಖಾ ಗಂದಿಗವಾಡ್ ಅವರು ಸ್ವಾಗತಗೀತೆ ಹಾಡಿದರು ಮತ್ತು ಸಾತೆರಪ್ಪ ಅವರು ಎಲ್ಲರಿಗೆ ವಂದಿಸಿದರು.
ಎ. ಎಂ. ಕರ್ನಾಚಿ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143





















