Live Stream

[ytplayer id=’22727′]

| Latest Version 8.0.1 |

Local NewsState News

ತ್ರಿಮೂರ್ತಿಸ್ವರೂಪಿ ಅವಧೂತಗುರು ದತ್ತಾತ್ರೇಯ – ಜ್ಞಾನ ಮತ್ತು ಭಕ್ತಿಯ ಸಮನ್ವಯದ ತಾತ್ವಿಕ ಪರಂಪರೆ

ತ್ರಿಮೂರ್ತಿಸ್ವರೂಪಿ ಅವಧೂತಗುರು ದತ್ತಾತ್ರೇಯ – ಜ್ಞಾನ ಮತ್ತು ಭಕ್ತಿಯ ಸಮನ್ವಯದ ತಾತ್ವಿಕ ಪರಂಪರೆ

 

ನಮ್ಮ ಸಂಸ್ಕೃತಿಯಲ್ಲಿ ‘ಅವತಾರ’ ತತ್ವವು ಅತ್ಯಂತ ವಿಶಿಷ್ಟವಾದುದು. ಧರ್ಮಕ್ಕೆ ಅಪಾಯ ಎದುರಾದಾಗ ದೇವರು ಸ್ವತಃ ಲೋಕರಕ್ಷಣೆಗೆ ಆಗಮಿಸುತ್ತಾನೆ ಎಂಬ ನಂಬಿಕೆಯೇ ಈ ತತ್ವದ ಮೂಲ. ಮೇಲಿಂದ ಇಳಿದು ಬರುವ ದೈವಸ್ವರೂಪವೇ ‘ಅವತಾರ’. ಇಂಥ ಮಹಾನ್ ಅವತಾರಗಳಲ್ಲಿ ದತ್ತಾತ್ರೇಯನ ಸ್ಥಾನ ಅತ್ಯಂತ ಮಹತ್ವದ್ದಾಗಿದೆ.

ದತ್ತಾತ್ರೇಯರು ಕೇವಲ ಒಬ್ಬ ದೇವರ ಅವತಾರ ಅಲ್ಲ; ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಸಂಯುಕ್ತ ಸ್ವರೂಪ. ದತ್ತಾತ್ರೇಯರನ್ನು ವಿಶೇಷವಾಗಿಸೋ ಮತ್ತೊಂದು ಅಂಶವೇನುಂದರೆ — ಅವರು ಗುರುಸ್ವರೂಪಿ, ಅಂದರೆ ಅವಧೂತಗುರು.

ಬ್ರಹ್ಮನು ಸೃಷ್ಟಿಯ ಮೂಲ, ವಿಷ್ಣುವು ಸ್ಥಿತಿಯ ರಕ್ಷಕ, ಮಹೇಶ್ವರನು ಲಯದ ಕರ್ತ. ಈ ಮೂರೂ ಶಕ್ತಿಗಳ ಸಮನ್ವಯವೇ ದತ್ತಾತ್ರೇಯ. ಆದ್ದರಿಂದ ದತ್ತಾತ್ರೇಯ ಮಹಾಗುರು ನಮ್ಮ ಜೀವನವನ್ನೂ ಸೃಷ್ಟಿ–ಸ್ಥಿತಿ–ಲಯಗಳ ಸಮತೋಲನದಲ್ಲಿ ರೂಪಿಸುವ ಶಕ್ತಿಯನ್ನು ಹೊಂದಿದ್ದಾರೆ. ಈ ಮಟ್ಟಿನ ವೈಶಾಲ್ಯವೇ ದತ್ತಾತ್ರೇಯನ ರೂಪದ ತಾತ್ಪರ್ಯ.

‘ಅವಧೂತ’ ಎಂದರೆ — ಆಸಕ್ತಿ, ಅಹಂಕಾರ, ರಾಗ, ದ್ವೇಷಗಳಿಗೆ ಅತೀತನಾದ ಪರಿಪೂರ್ಣ ಜ್ಞಾನಿ. ಸದಾ ಆನಂದದಲ್ಲಿ ನೆಲಸಿರುವ, ಲೋಕದೊಂದಿಗಿನ ವೈರಾಗ್ಯವನ್ನು ಅನುಭವಿಸುವ ಮಹಾಗುರು. ನಮ್ಮ ಜೀವನದಲ್ಲಿ ನಾವು ಬೆಳೆಸಬೇಕಾದ ಪ್ರಮುಖ ಮೌಲ್ಯವಾದ ರಾಗ–ದ್ವೇಷಗಳ ನಿರ್ಮೂಲನೆ ಎಂಬ ಸಂದೇಶವೇ ದತ್ತಾತ್ರೇಯನ ತತ್ವದ ಹೃದಯ. ಇಂಥ ಮನಸ್ಥಿತಿಯವನಿಗೆ ಎಲ್ಲೆಡೆ ಆನಂದವೇ ಕಾಣಿಸುತ್ತದೆ; ಇಂಥ ಜ್ಞಾನಿಯ ಮಾರ್ಗದರ್ಶನವೇ ಜೀವನಕ್ಕೆ ನಿಜವಾದ ಬೆಳಕು.

ದತ್ತಾತ್ರೇಯರು ಹೇಳುವ ಜ್ಞಾನವೂ ಅತಿಶಯ ವಿಶೇಷ. ಇದು ಜಾತಿ, ಕುಲ, ದೇಶ, ಕಾಲ, ಆಶ್ರಮಗಳ ಯಾವುದೇ ಬಲೆಗೆ ಬಿದ್ದ ಜ್ಞಾನವಲ್ಲ. ಈ ಜ್ಞಾನವನ್ನು ‘ಅವಧೂತ ಗೀತೆ’ಯಲ್ಲಿ ಸುಂದರವಾಗಿ ವರ್ಣಿಸಿದ್ದಾರೆ. ಈ ಬ್ರಹ್ಮಜ್ಞಾನವೇ ಅಖಂಡಾನಂದ; ಇದೇ ದತ್ತಾತ್ರೇಯನ ನಿತ್ಯಸ್ಥಿತಿ.

ಭಾರತೀಯ ದರ್ಶನಗಳಲ್ಲಿ ಚಾರ್ವಾಕದಿಂದ ವೇದಾಂತದ ತನಕ ಅನೇಕ ತತ್ತ್ವಧಾರೆಗಳಿವೆ. ಪರತತ್ತ್ವವನ್ನು ತಳ್ಳಿಹಾಕಿ ಕೇವಲ ಪ್ರತ್ಯಕ್ಷವನ್ನೇ ನಂಬುವ ಚಾರ್ವಾಕದಿಂದ ಹಿಡಿದು, ಕಾಣುವ ಜಗತ್ತನ್ನೇ ಮೃಗತ್ರಿಷ್ಣೆ ಎಂದು ಹೇಳುವ ವೇದಾಂತದತನಕ — ನಾನಾ ಅಭಿಪ್ರಾಯಗಳು ಅರಳಿದಿವೆ. ಇವೆಲ್ಲದರ ಮಧ್ಯದಲ್ಲಿ ಅವಧೂತ ಪರಂಪರೆ ತನ್ನದೇ ಆದ ವಿಶೇಷ ಸ್ಥಾನವನ್ನು ಗಳಿಸಿದೆ.

ಭಕ್ತಿ ಮತ್ತು ಜ್ಞಾನ — ಎರಡನ್ನೂ ಸಮನ್ವಯಗೊಳಿಸುವ ಅದ್ಭುತ ಮಾರ್ಗವೇ ಅವಧೂತತತ್ತ್ವ. ಈ ಮಾರ್ಗ ಸರಳ ಎಂದರೆ ಸರಳ, ಕಠಿಣ ಎಂದರೆ ಕಠಿಣ. ಭಜನೆ, ಜಪ, ಧ್ಯಾನ— ಜ್ಞಾನಮಾರ್ಗದಲ್ಲೂ ಮುಂದೆ ನಡೆಯಬಹುದು. ಸಗುಣೋಪಾಸನೆ–ನಿರ್ಗುಣೋಪಾಸನೆ ಎರಡರ ಸಮನ್ವಯವೇ ಅವಧೂತ ಪರಂಪರೆಯ ಸಾರ.

ವರದಿ: ಚೇತನ ಡಿ.ಕೆ
ನಮ್ಮೂರ ಧ್ವನಿ ನ್ಯೂಸ್
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ
+91 9164577143

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";