ಬೆಳಗಾವಿ ಬೆಳಗಾವಿ ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಅಗ್ರ ಸ್ಥಾನದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ದಿನಾಂಕ: ೧೨ ಮತ್ತು ೧೩ ಆಗಷ್ಟ ೨೦೨೪ ರಂದು ಬೆಳಗಾವಿಯ ಜಿ.ಎಸ್.ಎಸ್. ಪದವಿ
ಮಹಾವಿದ್ಯಾಲಯವು ಆಯೋಜಿಸಿದ್ದ “ಸೃಜನ್-೨೦೨೪” ಸಾಂಸ್ಕೃತಿಕ ಚಟುವಟಿಕೆಗಳ ಸ್ಪರ್ಧೇಗಳಲ್ಲಿ ಅತ್ಯುತ್ತಮ ಪ್ರತಿಭೆಯನ್ನು ಪ್ರದರ್ಶಿಸಿ ರನ್ನರ್ಸ ಆಪ್ ಸ್ಥಾನವನ್ನು
ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.
ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಶ್ರೀಜಲ್ ಜಿ., ಸಂಜನಾ ಎಸ್., ಅವರುಗಳು ಮಾಸ್ಟರ್ ಮತ್ತು ಮಿಸ್ ಸ್ಪರ್ಧೆಯಲ್ಲಿ ಪ್ರಥಮಸ್ಥಾನ, ಪೆಟಿಂಗ್-ವಿಶ್ವಕಲಾ
ಸ್ಪರ್ಧೆಯಲ್ಲಿ ವಿನಯ ಪ್ರಥಮಸ್ಥಾನ, ರಸಪ್ರಶ್ನೆ ಸ್ಪರ್ಧೆಯಲ್ಲಿ ಸೊಹಂ ಎಸ್.,ಸೌಂದರ್ಯ ಪಿ, ಶ್ರೀಜಲ ಜಿ ಅವರುಗಳು ದ್ವಿತೀಯಸ್ಥಾನವನ್ನು ಗಳಿಸಿದ್ದಾರೆ.
ಟ್ರಝರಹಂಟ ಸ್ಪರ್ಧೆಯಲ್ಲಿ ಸೂರಜ ಎಸ್., ಸ್ವರಾ ಕೆ., ಸಾಚಿ ಕೆ. ಮತ್ತು ವಿಶಾಲ ಎನ್. ಅವರುಗಳು ಭಾಗವಹಿಸಿದ್ದರು. ನಿವೇದಿತಾ ಕೆ. ಪೆಟಿಂಗ್ ಸ್ಪರ್ಧೆಯಲ್ಲಿ ರಿಚರ್ಡ ಎಚ್., ರಿತ್ವಿಕ್
ಆರ್., ಚರ್ಚಾಸ್ಪರ್ಧೆಯಲ್ಲಿ, ರಿಯಾ ಎಚ್, ಸೃಷ್ಟಿ ಜೆ., ಸ್ವರೂಪ ಪಿ, ಅರ್ಚಿತಾ ಡಿ., ಮತ್ತು ದಿವ್ಯಾಯಂಕಾ ಎಸ್., ಅವರುಗಳು ಭಾಗವಹಿಸಿದ್ದರು. ವೇದಾಂತ ಡಿ., ಪೋಟೋಗ್ರಾಫಿ
ಸ್ಪರ್ಧೆಯಲ್ಲಿ, ವರ್ಷಿಣಿ ಆಯ್., ಲಕ್ಷಿ ಎಸ್. ವರ್ಷಾ ಟಿ., ಶ್ರೀಯಾ ಎ, ಅಪೇಕ್ಷಾ ಕೆ., ಮತ್ತು ದಿವ್ಯಾನಿ ಎಸ್., ಭಾವಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿ ಕಾಲೇಜಿನ ಗೌರವಕ್ಕೆ ಪಾತ್ರರಾಗಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಹಾಗೂ ಸರ್ವಸದಸ್ಯರು, ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರು ಹಾಗೂ
ಸದಸ್ಯರು, ಕೆಎಲ್‌ಇ ಸಂಸ್ಥೆಯ ಆಜೀವ ಸದಸ್ಯರು, ಮಹಾವಿದ್ಯಾಲಯದ ಪ್ರಾಚಾರ್ಯರು, ಉಪಪ್ರಾಚಾರ್ಯರು ಹಾಗೂ ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿ ವೃಂದದವರು ಅಭಿನಂದನೆ
ಸಲ್ಲಿಸಿದ್ದಾರೆ.