ಬೆಳಗಾವಿ: ಜಿಲ್ಲೆಯ ಮೂಡಲಗಿ ಪಟ್ಟಣದ ಗಣೇಶ ನಗರದಲ್ಲಿ ಪ್ರಥಮ ಬಾರಿಗೆ,ಶ್ರೀ ಗಜಾನನ ಯುವಕ ಮಂಡಳದ ವತಿಯಿಂದ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ಜರುಗಿತು.
ಹೌದು, ಮೂಡಲಗಿಯ ಶ್ರೀ ಗಜಾನನ ಯುವಕ ಮಂಡಳದಿಂದ ಗಣೇಶ ನಗರದಲ್ಲಿ, 55 ಹೆಚ್. ಪಿ ಟ್ರ್ಯಾಕ್ಟರ್ 04 ಗಾಲಿಯ ಗರಸು ತುಂಬಿದ ಡಬ್ಬಿ ಜಗ್ಗುವ ಸ್ಪರ್ಧೆ ಜರುಗಿತು. ಈ ಸ್ಪರ್ಧೆಗೆ 03 ನಿಮಿಷದ ಕಾಲಾವಕಾಶವನ್ನ ಕೊಡಲಾಗಿತ್ತು. ಬೆಳಿಗ್ಗೆ 09 ಗಂಟೆಗೆ ಈ ಶುರುವಾದ ಈ ಸ್ಪರ್ಧೆಯಲ್ಲಿ, ಅತೀ ಹುಮ್ಮಸ್ಸಿನಿಂದ ಭಾಗವಹಿಸಿ ಪ್ರಥಮ 150001 ರೂ, ದ್ವಿತೀಯ 100001 ರೂ, ತೃತೀಯ 70001 ರೂ ಹಾಗೂ ಚತುರ್ಥ 50001 ರೂ ಬಹುಮಾನಗಳನ್ನ ನೀಡಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನ ಪೂಜ್ಯಶ್ರೀ ಶಾನಯ್ಯ ಹಿರೇಮಠ ಅವರು ವಹಿಸಿದ್ದರು. ಅನ್ನಪ್ರಸಾದ ಸೇವೆಯನ್ನ ಲಕ್ಷ್ಮಣ ಗುಡ್ಲಿಯವರು ವಹಿಸಿದ್ದರು.ಮೂಡಲಗಿಯ ಪುರ ಸಭೆಯ ಸದಸ್ಯರಾದ ಈರಣ್ಣ ಶಿವರುದ್ರಪ್ಪ ಕೊಣ್ಣೂರ ಇವರು ಪ್ರಥಮ ಬಹುಮಾನದ ಪ್ರಾಯೊಜಕರಾಗಿ, ಕಾರ್ಯಕ್ರಮದ ಉದ್ಘಾಟಕರಾಗಿ ಕಾರ್ಯಕ್ರಮಕ್ಕೆ ಮೆರಗು ತಂದಿದ್ದಾರೆ.
ಈ ವೇಳೆ, ಪೂಜ್ಯಶ್ರೀ ಶಾನಯ್ಯ ಹಿರೇಮಠ, ಮಲೇಶ ನೇಮಗೌಡರ ಅಧ್ಯಕ್ಷರು, ಶ್ರೀ ಗಜಾನನ ಯುವಕ ಮಂಡಳ ಮೂಡಲಗಿ, ಈರಣ್ಣ ಕೊಣ್ಣೂರ ಸದಸ್ಯರು, ಪುರಸಭೆ ಮೂಡಲಗಿ, ಸಂತೋಷ ಸೋನವಾಲಕರ, ಮಲ್ಲಪ್ಪ ಮದಗುಣಕಿ, ಮಲ್ಲು ಡವಳೆಶ್ವರ, ಸಿದ್ದಪ್ಪ ಬಳಿಗಾರ, ಅಶೋಕ ಕೋಟಗಿ ಹಾಗೂ ಗಣೇಶನಗರದ ನಿವಾಸಿಗಳು ಉಪಸ್ಥಿತರಿದ್ದರು.