Live Stream

[ytplayer id=’22727′]

| Latest Version 8.0.1 |

International NewsNational News

ವೈಭವ್ ಸೂರ್ಯವಂಶಿ: ಐಪಿಎಲ್ ಇತಿಹಾಸದಲ್ಲೇ ಕಿರಿಯ ಆಟಗಾರ, 14ರ ಬಾಲಕನ ಅಬ್ಬರಕ್ಕೆ ಬೆರಗಾದ ಗೂಗಲ್‌ CEO !

ವೈಭವ್ ಸೂರ್ಯವಂಶಿ: ಐಪಿಎಲ್ ಇತಿಹಾಸದಲ್ಲೇ ಕಿರಿಯ ಆಟಗಾರ, 14ರ ಬಾಲಕನ ಅಬ್ಬರಕ್ಕೆ ಬೆರಗಾದ ಗೂಗಲ್‌ CEO !

 

ಬಿಹಾರ: ಸಮಸ್ತಿಪುರ ಮೂಲದ ಎಡಗೈ ಬ್ಯಾಟ್ಸ್‌ಮನ್ ವೈಭವ್, ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ತನ್ನ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸರ್ ಸಿಡಿಸಿ ನೆರೆದಿದ್ದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ. ಈ ಮೂಲಕ ಐಪಿಎಲ್‌ನಲ್ಲಿ ತಮ್ಮ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ವಿಶೇಷ ಕ್ಲಬ್‌ಗೆ ವೈಭವ್ ಸೇರಿಕೊಂಡರು.

ಕೇವಲ 14 ವರ್ಷ ಮತ್ತು 23 ದಿನಗಳ ಬಾಲಕ ವೈಭವ್ ಸೂರ್ಯವಂಶಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲೇ ಕಿರಿಯ ಆಟಗಾರನಾಗಿ ಕಣಕ್ಕಿಳಿದು ಎಲ್ಲರ ಗಮನ ಸೆಳೆದಿದ್ದಾನೆ. ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಗಾಯಗೊಂಡಿದ್ದರಿಂದ ವೈಭವ್‌ಗೆ ಶನಿವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡುವ ಅವಕಾಶ ಸಿಕ್ಕಿತು.

ಅವರು ಕೇವಲ 20 ಎಸೆತಗಳಲ್ಲಿ 34 ರನ್‌ಗಳಿಸಿ ಮಿಂಚಿನ ಇನ್ನಿಂಗ್ಸ್ ಆಡಿದರು. ಯಶಸ್ವಿ ಜೈಸ್ವಾಲ್ ಅವರೊಂದಿಗೆ 85 ರನ್‌ಗಳ ಭರ್ಜರಿ ಆರಂಭಿಕ ಜೊತೆಯಾಟವನ್ನು ನೀಡಿದರು.

ವೈಭವ್ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಗೂಗಲ್ ಸಿಇಒ ಸುಂದರ್ ಪಿಚೈ ಅವರ ಗಮನವನ್ನೂ ಸೆಳೆಯಿತು. ಅವರು ಟ್ವಿಟರ್‌ನಲ್ಲಿ ತಮ್ಮ ಅಚ್ಚರಿಯನ್ನು ವ್ಯಕ್ತಪಡಿಸುತ್ತಾ, “8ನೇ ತರಗತಿಯ ಹುಡುಗ ಐಪಿಎಲ್‌ನಲ್ಲಿ ಆಡುತ್ತಿರುವುದನ್ನು ನೋಡಿದೆ !!!! ಎಂತಹ ಅದ್ಭುತ ಆರಂಭ !” ಎಂದು ಬರೆದಿದ್ದಾರೆ.

ಕಳೆದ ವರ್ಷ ನಡೆದ ಐಪಿಎಲ್ 2025ರ ಹರಾಜಿನಲ್ಲಿ ಕೇವಲ 13 ವರ್ಷದವರಾಗಿದ್ದಾಗಲೇ ವೈಭವ್ ಅತಿ ಕಿರಿಯ ಆಟಗಾರನಾಗಿ 1.1 ಕೋಟಿ ರೂಪಾಯಿಗಳ ಒಪ್ಪಂದವನ್ನು ಪಡೆದಿದ್ದರು. ಇದಕ್ಕೂ ಮುನ್ನ ಅವರು ಭಾರತದ ಅಂಡರ್-19 ತಂಡವನ್ನು ಪ್ರತಿನಿಧಿಸಿ ಆಸ್ಟ್ರೇಲಿಯಾ ಅಂಡರ್-19 ವಿರುದ್ಧದ ನಾಲ್ಕು ದಿನಗಳ ಪಂದ್ಯದಲ್ಲಿ ಕೇವಲ 58 ಎಸೆತಗಳಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದರು.

ಆದರೆ ವೈಭವ್ ಅವರ ಅದ್ಭುತ debut ಹೊರತಾಗಿಯೂ, ರಾಜಸ್ಥಾನ್ ರಾಯಲ್ಸ್ ಕೇವಲ 2 ರನ್‌ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋಲನುಭವಿಸಿತು.

ಲಕ್ನೋ ಸೂಪರ್ ಜೈಂಟ್ಸ್ ಪರವಾಗಿ ಐಡೆನ್ ಮಾರ್ಕ್ರಾಮ್ ಮತ್ತು ಆಯುಷ್ ಬಡೋನಿ ಅರ್ಧಶತಕ ಗಳಿಸಿ ತಂಡಕ್ಕೆ 180 ರನ್‌ಗಳ ಮೊತ್ತ ತಲುಪಲು ನೆರವಾದರು. ರಾಜಸ್ಥಾನ್ ಪರವಾಗಿ ಜೈಸ್ವಾಲ್ (74), ರಿಯಾನ್ ಪರಾಗ್ (39) ಮತ್ತು ಯುವ ವೈಭವ್ (34) ಉತ್ತಮ ಹೋರಾಟ ನೀಡಿದರೂ, ಅವೇಶ್ ಖಾನ್ ಅವರ ಉತ್ತಮ ಬೌಲಿಂಗ್‌ನಿಂದಾಗಿ (37 ರನ್‌ಗಳಿಗೆ 3 ವಿಕೆಟ್) ರಾಜಸ್ಥಾನ್ 178 ರನ್‌ಗಳಿಗೆ ಸೀಮಿತವಾಯಿತು.

ರಾಜಸ್ಥಾನ್ ರಾಯಲ್ಸ್ ತನ್ನ ಮುಂದಿನ ಪಂದ್ಯದಲ್ಲಿ ಏಪ್ರಿಲ್ 24 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";