ಹುಕ್ಕೇರಿ: ತಾಲೂಕಿನ ವಿವಿಧಡೆ ಕೆಲ ಗಂಟೆಗಳ ಕಾಲ ವಿಪರೀತ ಗಾಳಿ ಸಹಿತ ಮಳೆ ಸುರಿದಿದ್ದು ಬಿಸಿಲ ದಾಹದಿಂದ ದಣಿದಿದ್ದ ಭೂಮಿಗೆ ತಂಪೆರೆದಂತಾಗಿದೆ.
ಆದರೆ, ಭಾರಿ ಮಳೆಗೆ ತಾಲೂಕಿನ ದಡ್ಡಿ ಗ್ರಾಮದ ಸಂತೆಗೆ ನುಗ್ಗಿದ ಮಳೆ ನೀರಿನಿಂದ ತರಕಾರಿ ಹರಿದು ಹೋಗುತ್ತಿರುವ ದೃಶ್ಯಗಳು ಕಂಡುಬಂದವು. ಕೆಲ ಕಾಲ ಜನಜೀವನ ಅಸ್ತವ್ಯಸ್ತಗೊಂಡಿತು.