Live Stream

[ytplayer id=’22727′]

| Latest Version 8.0.1 |

International NewsNational News

ಪ್ರೆಗ್ನೆನ್ಸಿ ಅನೌನ್ಸ್‌ ಮಾಡಲು ಪಾರ್ಟಿ ಕೊಟ್ಟ 9 ವರ್ಷದ ಬಾಲಕಿ; ವಿಡಿಯೋ ವೈರಲ್‌

ಪ್ರೆಗ್ನೆನ್ಸಿ ಅನೌನ್ಸ್‌ ಮಾಡಲು ಪಾರ್ಟಿ ಕೊಟ್ಟ 9 ವರ್ಷದ ಬಾಲಕಿ; ವಿಡಿಯೋ ವೈರಲ್‌

 

ನಮ್ಮೂರ ಧ್ವನಿ ಸುದ್ದಿವಾಹಿನಿ:

ಗೊಂಬೆ, ಅಡುಗೆ ಆಟಿಕೆ, ಸೈಕಲ್‌ ಜೊತೆ ಆಡಬೇಕಿದ್ದ ಒಂಬತ್ತರ ಬಾಲಕಿ ತನ್ನ ಪ್ರೆಗ್ನೆನ್ಸಿ ಅನೌನ್ಸ್‌ ಮಾಡೋದಕ್ಕೆ ಪಾರ್ಟಿ ನೀಡಿದ್ದಾಳೆ. ಈ ಘಟನೆ ನಡೆದಿರೋದು ನಮ್ಮ ದೇಶದಲ್ಲಲ್ಲ, ಇರಾಕ್‌ನಲ್ಲಿ. ಪಟಾಕಿ ಸಿಡಿಸಿ, ಅತ್ಯಂತ ಖುಷಿಯಿಂದ ಬಾಲಕಿ ತನ್ನ ಪ್ರೆಗ್ನೆನ್ಸಿಯನ್ನು ಆಚರಿಸಿಕೊಂಡಿದ್ದಾಳೆ.

ಜೆಂಡರ್‌ ರಿವೀಲ್‌ ವಿಡಿಯೋ ಇದಾಗಿದ್ದು, ಭಾರಿ ಕೋಲಾಹಲ ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಘಟಕ ಸೇರಿದಂತೆ ಹಲವರು ಇರಾಕ್ ವಿರುದ್ಧ ಕೆಂಡ ಕಾರಿದ್ದಾರೆ. ಆದರೆ ಯಾವುದೇ ಪ್ರಯೋಜನವಿಲ್ಲ.

ಈ ವಿಡಿಯೋ ಹಾಗೂ ಹರಿದಾಡುತ್ತಿರುವ ಮಾಹಿತಿ ಪ್ರಕಾರ 9 ವರ್ಷದ ಬಾಲಕಿ ಗರ್ಭಿಣಿಯಾಗಿದ್ದಾಳೆ. ಹೆಚ್ಚು ಕಡಿಮ 3 ರಿಂದ 5 ತಿಂಗಳು. ಈಕೆ ತನ್ನ ತಾಯಿಯಾಗುತ್ತಿರುವ ಖುಷಿನ್ನು ಕಲರ್ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾಳೆ. ಮುಖದಲ್ಲಿ ಸಂತೋಷ, ನಗು ಎಲ್ಲವೂ ಇದೆ. ಕಾರಣ ಈ ಬಾಲಕಿಗೆ ಇರಾಕ್‌ನ ಎಲ್ಲಾ ಹೆಣ್ಣುಮಕ್ಕಳಂತೆ ಇದುವೇ ಸಂಭ್ರಮಿಸುವ ಮಾರ್ಗ.ಆದರೆ ಈ ವಿಡಿಯೋ ಗದ್ದಲ ಶುರುವಾಗುತ್ತಿದ್ದಂತೆ ಹಲವು ಸಂಘಟನೆಗಳು ಇದರ ವಿರುದ್ಧ ಆಕ್ರೋಶ ಹೊರಹಾಕಿದೆ.

ಇರಾಕ್‌ನಲ್ಲಿ ಹೆಣ್ಣುಮಕ್ಕಳ ಕಾನೂನು ಬದ್ಧ ವಿವಾಹ ವಯಸ್ಸು 9. ನಿಮಗೆ ಅಚ್ಚರಿಯಾಗಬಹುದು. ಇದು ಗತಗಾಲದಲ್ಲಿ ಮಾಡಿದ ನಿಯಮವಲ್ಲ. 2024ರ ಆಗಸ್ಟ್ ತಿಂಗಳಲ್ಲಿ ರೂಪಿಸಿದ ನಿಯಮ. ಇದಕ್ಕೂ ಮೊದಲು ಇರಾಖ್‌ನಲ್ಲಿ ಮದುವೆ ವಯಸ್ಸು 18 ಆಗಿತ್ತು. ಆದರೆ, ಕಳೆದ ಹಲವು ದಶಕಗಳಿಂದ ಇರಾಕ್‌ನಲ್ಲಿ ಪ್ರಾಥಮಿಕ ಶಾಲಾ ಮಟ್ಟದಲ್ಲೇ ಹಣ್ಣುಮಕ್ಕಳನ್ನು ಮದುವೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಪ್ರಾಥಮಿ ಶಾಲೆಗಳಲ್ಲಿ ಮಕ್ಕಳು ಗರ್ಭಿಣಿಯಾಗುತ್ತಿದ್ದಾರೆ. ಅಪ್ರಾಪ್ತ ಬಾಲಕಿಯರು ತಾಯಿಯಾಗುತ್ತಿದ್ದಾರೆ.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";