ಹುಣಸೂರು– ತಾಲೂಕಿನ ದೇವಗಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜೃಂಭಣೆಯ 78ನೇಯ ಸ್ವಾತಂತ್ರೋತ್ಸವ ದಿನಾಚರಣೆ ಜರುಗಿತು. ಗ್ರಾಮದ ಹಿರಿಯರು ,ಅತಿಥಿಗಳು ಧ್ವಜಾರೋಹಣ ನೆರವೇರಿಸಿದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನ ಜರುಗಿದವು . ಶಾಲೆಯಿಂದ ಆರಂಭಗೊಂಡ ಮಕ್ಕಳ ಪಥ ಸಂಚಲನ ಜಾಥಾವು ಊರಿನ ಬೀದಿ ಬೀದಿಗಳಲ್ಲಿ ಸಾಗಿ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರ, ದೇಶಭಕ್ತರ ಘೋಷಣೆಗಳನ್ನು ಕೂಗುತ್ತ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ನಾಗರಾಜೇ ಅರಸ್ ಊರಿನ ಹಿರಿಯರು,ಗ್ರಾ ಪಂಸದಸ್ಯರು ಮೀನಾಕ್ಷಮ್ಮಣ್ಣಿ ಪಳನಿಸ್ವಾಮಿ, ಎಸ್.ಡಿ.ಎಂ.ಸಿ ಅಧ್ಯಕ್ಷ ರು ಆರ್ ಮಂಜು, ಉಪಾಧ್ಯಕ್ಷರು ಮಂಗಳ ,ಸದಸ್ಯರು ರೇಣುಕಾ ಶಾಂತಾ ಜವರಾಜು,ಚಿಕ್ಕಣ್ಣ ಪಳನಿಸ್ವಾಮಿ, ಕರಿಮುದ್ದನಹಳ್ಳಿ ಗ್ರಾಮಸ್ಥರಾದ ದೇವರಾಜು,ಗ್ರಾ ಪಂ ಅಧ್ಯಕ್ಷ ರು ದೇವರಾಜು,ನಂಜುಂಡರಾಜೇ ಅರಸ್ ಶಶಿ ಅರಸ್,ಬಸವರಾಜೇ ಅರಸ್,ತ್ಯಾಗರಾಜೇ ಅರಸ್, ಶ್ರೀ ಗೋವಿತ್ ಕಿರಣ್ ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ರಾಜ್ಯ ಸಂಯೋಜಕರು ಹಳೆಯ ವಿದ್ಯಾರ್ಥಿಗಳ ಸಂಘದಿಂದ ಆನಂದ್ ರಾಜೇ ಅರಸ್ ವೆಂಕಟೇಶ್ ವಿಶ್ವನಾಥ್ ಕೆಂಡಗಣ್ಣ ಅಜಿತ್ ಮಲ್ಲರಾಜೇ ಅರಸ್,ರಾಮರಾಜೇ ಅರಸ್ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು