ಮೂಡಲಗಿ: ಬೇಸಿಗೆ ಕಾಲಾವಧಿ ಆದ್ದರಿಂದ ರಾಷ್ಟ್ರೀಯ ಸ್ವಯಂ ಸೇವಾ ಶಿಬಿರಾರ್ಥಿಗಳಿಗೆ ಸಂಘಟಕರು ಹಾಗೂ ಗ್ರಾಮಸ್ಥರು ಶಿಬಿರದ ಅವಧಿಯಲ್ಲಿ ಉತ್ತಮ ಪೌಷ್ಟಿಕ ಆಹಾರ ಉತ್ತಮ್ಮ ನೀರು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿ ಶಿಬಿರಾರ್ಥಿಗಳ ಸೇವಾ ಕಾರ್ಯಗಳಿಗೆ ನೇರವಾಗಬೇಕು ಎಂದು ತಹಶೀಲ್ದಾರ್ ಎಸ್. ವ್ಹಿ. ಬಬಲಿ ಕರೆ ಕೊಟ್ಟರು.
ಮೂಡಲಗಿ ಸಮೀಪದ ದತ್ತು ಗ್ರಾಮ ಖಾನಟ್ಟಿಯಲ್ಲಿ ಹಮ್ಮಿಕೊಂಡಿದ್ದ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಮಾತನಾಡುತ್ತಿದ್ದರು.
ಮೂಡಲಗಿ ತಾಲೂಕ ಪಶು ಸಂಗೋಪನ ಇಲಾಖೆಯ ಉಪನಿರ್ದೇಶಕರಾದ ಡಾ. ಎಮ್. ಜಿ. ವಿಭೂತಿ ಮಾತನಾಡಿ, ರಾಷ್ಟ್ರವನ್ನು ಸನ್ಮಾರ್ಗದಲ್ಲಿ ಸದೃಢವಾಗಿ ನಿರ್ಮಾಣ ಮಾಡಲು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸರ್ಕಾರ ರಾಷ್ಟ್ರೀಯ ಸೇವಾ ಯೋಜನೆ ಜಾರಿ ತಂದಿದ್ದು ಈ ಯೋಜನೆಯ ಸದುಪಯೋಗಕ್ಕೆ ಶಾಲಾ ಕಾಲೇಜುಗಳು ಗ್ರಾಮಸ್ಥರು ಸಹಕರಿಸಬೇಕೆಂದು ಅಭಿಪ್ರಾಯಪಟ್ಟರು. ಹೈನುಗಾರಿಕೆಯನ್ನು ವಿದ್ಯಾರ್ಥಿಗಳು ಒಂದು ಸ್ವಯಂ ಉದ್ಯೋಗವನ್ನಾಗಿಸಿಕೊಳ್ಳಲು ಅವಕಾಶವಿದ್ದು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿಕೊಂಡರೆ ನಮ್ಮ ಇಲಾಖೆಯಿಂದ ಮಾರ್ಗದರ್ಶನ ಮಾಡಲಗುವುದು ಎಂದರು.
ಅಧ್ಯಕ್ಷ ಪರವಾಗಿ ಮಾತನಾಡಿದ ಪ್ರಾಚಾರ್ಯರಾದ ಜಿ. ವ್ಹಿ ನಾಗರಾಜ ಏಳು ದಿನಗಳ ಈ ಶಿಬಿರದಲ್ಲಿ ಪರಿಸರ ಸಂರಕ್ಷಣೆ ಹಾಗೂ ಯುವಜನತೆ ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ನಿಯಂತ್ರಣ, ಸಾರ್ವಜನಿಕ ಉಚಿತ ಮಧುಮೇಹ ಮತ್ತು ಕಣ್ಣಿನ ತಪಾಸನೆ ಶಿಬಿರ, ಗ್ರಾಮ ಅಭಿವೃದ್ಧಿ ಮತ್ತು ಸಹಕಾರಿ ಸಂಘಗಳು ಕಾನೂನು ಸಾಕ್ಷರತಾ ಅರಿವು ನೆರವು ಮಹಿಳಾ ಸಬಲೀಕರಣ ಹೀಗೆ ಹತ್ತು ಹಲವು ವಿಷಯಗಳನ್ನು ನಮ್ಮ ಶಿಬಿರದಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ಸಮಾರಂಭದಲ್ಲಿ, ದಿವ್ಯ ಸಾನಿಧ್ಯವನ್ನು ಖಾನಟ್ಟಿಯ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಮಹಾಲಿಂಗಯ್ಯ ಪೂಜೇರಿ, ಖಾನಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಬಸಲಿಂಗವ್ವ ಮುಗಳಖೋಡ, ಮೂಡಲಗಿ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷರಾದ ಆರ್.ಪಿ. ಸೋನವಾಲ್ಕರ, ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಡಾ. ಎಸ. ಏಲ್. ಚಿತ್ರಗಾರ, ಗ್ರಾಮದ ಹಿರಿಯರಾದ ಶಿವಣಪ್ಪ ತುಪ್ಪದ, ಶಂಕರ್ ಢೋಣಿ, ಖಾನಟ್ಟಿ ಪಿಕೆಪಿಎಸ್ ಚೇರಮನ ಮಹಾಂತೇಶ ರಡ್ಡೇರಟ್ಟಿ, ಪ್ರೊ. ಎಸ್,ಸಿ, ಮಂಟೂರ, ಪ್ರೊ. ಎ, ಎಸ್, ಮಿಶಿನಾಯಿಕ, ಪ್ರೊ. ಎಮ್, ಎಸ್. ಕುಂದರಗಿ, ಪ್ರೊ. ವ್ಹಿ, ಜೇ, ಬೈರನಟ್ಟಿ, ಡಾ. ಬಿ, ಎಮ್, ಬರಗಾಲಿ.ಭಾರತಿ ತಳವಾರ, ವಿಷ್ಣು ಬಾಗಡಿ, ಪ್ರೊ. ಪಿ, ಬಿ, ಚೌಡಕಿ. ಪ್ರೊ. ಸಿದ್ದರಾಮ ಸವಸುದ್ದಿ, ಪ್ರೊ. ಸವಿತಾ ಕೊತ್ತಲ, ಪ್ರೊ. ಪ್ರೀತಿ ಬೆಳಗಲಿ, ರಮೇಶ ಖಾನಪ್ಪಗೋಳ, ಕಲ್ಮೇಶ ಇಂಗಳೆ ಮುಂತಾದವರು ಉಪಸ್ಥಿತರಿದ್ದರು.
ಗೋಪಾಲ ದರೂರ ಪ್ರಾರ್ಥಿಸಿದರು .
ಪ್ರಾಚಾರ್ಯ ಜಿ. ವ್ಹಿ ನಾಗರಾಜ ಸ್ವಾಗತಿಸಿದರು.
ಉಪನ್ಯಾಸಕ ಎಲ್. ಪಿ ಹಿಡಕಲ್ ವಂದಿಸಿದರು.