ಹುಣಸೂರು: ತಾಲೂಕಿನ ಸಿಂಗರ ಮಾರನಹಳ್ಳಿ ಗ್ರಾಮಪಂಚಾಯತಿ ವ್ಯಾಪ್ತಿಯ ಸೊನಹಳ್ಳಿ ಗ್ರಾಮದಲ್ಲಿ, ಅಮೃತ ಕೃಪ ಆಸ್ಪತ್ರೆ, ಮಾತಾ ಅಮೃತಾನಂದಮಯಿ ಮಠ, ಮೈಸೂರು ಬ್ಯಾಂಕ್, ನೋಟ್ ಪೇಪರ್ ಬಸ್ ಇಂಡಿಯಾ ಪ್ರೈ. ಲಿ ಮೈಸೂರು, ಏಕಲ್ ಗ್ರಾಮೋಥಾನ್ ಫೌಂಡೇಶನ್,ವಿಶ್ವ ಹಿಂದೂ ಪರಿಷತ್ ಇವರ ಸಹಯೋಗದೊಂದಿಗೆ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಶಿಬಿರದಲ್ಲಿ ವಿಶೇಷವಾಗಿ ಮೊಬೈಲ್ ಆಸ್ಪತ್ರೆ, ಗ್ರಾಮದಲ್ಲಿ ಬಂದು ಒಂದೇ ಜಾಗದಲ್ಲಿ ಬಿಪಿ – ಶುಗರ್, ರಕ್ತ ಪರೀಕ್ಷೆ, ಎಕ್ಷ ರೇ , ಇಸಿಜಿ ಮತ್ತು ರಕ್ತದೊತ್ತಡದ ಪರೀಕ್ಷೆ ಮಾಡಿದರು. ಸುಮಾರು ಗ್ರಾಮದ 200 ಕ್ಕೂ ಹೆಚ್ಚು ಜನರು ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅನುಕೂಲವನ್ನು ಪಡೆದರು ಹಾಗೂ ಉಚಿತ ಔಷಧಿ ಕೂಡ ವಿತರಿಸಿದರು. ಈ ಎಲ್ಲ ಪರೀಕ್ಷೆಗಳನ್ನು ಉಚಿತವಾಗಿ ಸೋನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳಲ್ಲಿ ನಡೆಯಿತು.
ಈ ಶಿಬಿರದಲ್ಲಿ ಆಸ್ಪತ್ರೆ ವೈದ್ಯರಾದ ಡಾ. ಸೌಮ್ಯ, ಸಿಬ್ಬಂದಿಗಳು , ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆ ಮಣಿ , ಏಕಲ್ ಗ್ರಾಮೋಥಾನ್ ಫೌಂಡೇಶನ್ ಸಂಸ್ಥೆಯ ರಾಜ್ಯ ಸಂಯೋಜಕರಾದ ಗೋವಿತ್ ಕಿರಣ್, ಮೈಸೂರು ಅಂಚಲ್ ಉಪಾಧ್ಯಕ್ಷರಾದ ಕುಂಟೆ ಗೌಡರು, ಸಿಂಗರ ಮಾರ್ನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೇವರಾಜ್, ಸದಸ್ಯರು, ಗ್ರಾಮಸ್ಥರು ಹಾಗೂ ಇತರರು ಉಪಸ್ಥಿತರಿದ್ದರು.