ಉತ್ತರಪ್ರದೇಶ: ಇಲ್ಲಿನ ಲಲಿತಪುರ ರೈಲು ನಿಲ್ದಾಣದಲ್ಲಿ ನಡೆದ ಘಟನೆ. ರೈಲು ಕಿಟಕಿಯಿಂದ ಜಾರಿ ಬಿದ್ದ ಮಗಳನ್ನ 16 ಕಿಮೀ ಹೋಗಿ ಕಾಪಾಡಿಕೊಂಡ ತಂದೆ.
ಹೌದು, ಮಥುರಾದ ನಿವಾಸಿಯಾದ ಅರವಿಂದ ಎಂಬಾತ, ತನ್ನ ಮಗಳು ಗೌರಿಯೊಂದಿಗೆ ಕುರುಕ್ಷೇತ್ರದಿಂದ ಮಥುರಾಕ್ಕೆ ವಾಪಸ್ ಆಗುತ್ತಿದ್ದರು. ಈ ವೇಳೆ, ರಾತ್ರಿ ಎಮರ್ಜೆನ್ಸಿ ವಿಂಡೋ ಬಳಿ ಮಗಳನ್ನ ಮಲಗಿಸಿದ್ದರು. ಮುಂದಿನ ನಿಲ್ದಾಣದಲ್ಲಿ ಹತ್ತಿಕೊಂಡ ಪ್ರಯಾಣಿಕರು ಗಾಳಿ ಬರಲಿ ಅಂತ ತುರ್ತು ಕಿಟಕಿಯನ್ನ ತೆರೆದಾಗ ಆಕೆ ಜಾರಿ ಹೊರಗೆ ಬೀಳುತ್ತಾಳೆ.
ಮಗಳು ಜಾರಿ ಬಿದ್ದ ಕೂಡಲೇ, ಅಪ್ಪನಿಗೆ ದಿಕ್ಕು ತೋಚಡಾಯಿತು. ಕೂಡಲೇ ರೈಲಿನ ಚೈನ್ ಎಳೆದು ಅಳುತ್ತಾ 112ಕ್ಕೆ ಕರೆ ಮಾಡಿ ಪೊಲೀಸರ ಸಹಾಯ ಕೋರಿದ್ದ. ಅಷ್ಟೊತ್ತಿಗಾಗಲೇ ರೈಲು 16 ಕಿಮೀ ದೂರ ಚಲಿಸಿತ್ತು. ರೈಲು ನಿಂತ ತಕ್ಷಣ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಜೊತೆ ಸೇರಿ ಮಗಳ ಹುಡುಕಾಟಕ್ಕೆ ಮುಂದಾದ.
ಪೊಲೀಸರ ತಂಡ 3 ಟೀಮ್ ಗಳಾಗಿ ಮಗುವಿನ ರಕ್ಷಣೆಗೆ ಮುಂದಾದರು. ಎರಡು ಟೀಮ್ ವಾಹದಲ್ಲಿ ಹುಡುಕಾಟ ನಡೆಸಿದರೆ, ಮತ್ತೊಂದು ಟೀಮ್ ಟ್ರ್ಯಾಕ್ ಮೇಲೆ ಹುಡುಕಲು ಪ್ರಾರಂಭಿಸಿತು.
ನಂತರ ವಿರಾರಿ ಸ್ಟೇಷನ್ ಬಳಿಗೆ ಬೆಳಕೇ ಇಲ್ಲದ ನಿರ್ಜನ ಪ್ರದೇಶದ ಪೊದೆ ಒಂದರಲ್ಲಿ ಮಗಳು ಬಿದ್ದಿದ್ದು ತಿಳಿದು, ಅರವಿಂದ ಗಾಯಗೊಂಡು ಬಿದ್ದಿದ್ದ ತನ್ನ ಮಗಳನ್ನ ರಕ್ಷಿಸಿದರು. ಆಮೇಲೆ ಕೂಡಲೇ ಮಗುವನ್ನ ಲಲಿತಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗು ಚೇತರಿಸಿಕೊಂಡಿದೆ.