ನವದೆಹಲಿ: ಛತ್ತೀಸ್ಗಢದ ಬಿಜೆಪಿ ನಾಯಕ ಧೀರಜ್ ಸಿಂಗ್ ದೇವ್ ಅವರ 6 ವರ್ಷದ ಮಗ ಮಂಗಳವಾರ ರಾತ್ರಿ ಅಂಬಿಕಾಪುರದಲ್ಲಿರುವ ತನ್ನ ಚಿಕ್ಕಮ್ಮನ ಮನೆಯ ಹೊರಗೆ ಆಟವಾಡುತ್ತಿದ್ದ ವೇಳೆ ಕಾರಿನಡಿ ಸಿಲುಕಿ ಸಾವನ್ನಪ್ಪಿದ್ದಾನೆ. ಈ ಘಟನೆಯ ನಂತರ, ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆ ಮಗು ಚಿಕಿತ್ಸೆ ವೇಳೆ ಸಾವನ್ನಪ್ಪಿದೆ.
ಈ ಘಟನೆ ಮನೆಯ ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 6 ವರ್ಷದ ಹುಡುಗ ಬೇರೆ ಮಕ್ಕಳು ಮತ್ತು ಮಹಿಳೆಯೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿರುವುದನ್ನು ಕಾಣಬಹುದು. ಆಗ ಆ ಬಾಲಕ ರಸ್ತೆಯ ಮಧ್ಯ ಕುಳಿತು ಏನೋ ಮಾಡುತ್ತಿದ್ದ. ಆಗ ಹಿಂದಿನಿಂದ ಬಂದ ಒಂದು ಕಾರು ತಿರುವಿನಲ್ಲಿ ಕುಳಿತಿದ್ದ ಮಗುವಿನ ಮೇಲೆ ಹರಿದಿದೆ. ಇದರಿಂದ ಆ ಬಾಲಕ ಕಾರಿನಡಿ ಸಿಲುಕಿ ಗಾಯಗೊಂಡಿದ್ದಾನೆ.
ವರದಿಗಳ ಪ್ರಕಾರ, ಈ ಘಟನೆಯ ನಂತರ ಕಾಲೋನಿಯ ಜನರು ಮತ್ತು ಬಿಜೆಪಿ ನಾಯಕನ ಸೋದರ ಮಾವ ಅಭಿಷೇಕ್ ಸಿಂಗ್ ಆರೋಪಿ ಚಾಲಕನನ್ನು ಹಿಡಿದು ಕೆಟ್ಟದಾಗಿ ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಈ ನಡುವೆ ಸಂತ್ರಸ್ತೆಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.