ಹೈದರಾಬಾದ್: ಇಲ್ಲಿನ ಅಲ್ವಾಲ್ ಎಂಬಲ್ಲಿ ಈ ಘಟನೆ ನಡೆದಿದೆ. ಬೈಕ್ ಸವಾರನಿಗೆ ಬೈಕ್ ನಿಧಾನಕ್ಕೆ ಓಡಿಸಪ್ಪಾ ಎಂದಿದ್ದಕ್ಕೆ ವೃದ್ಧನನ್ನು ಒಂದೇ ಏಟಿಗೆ ಕೊಂದು ಹಾಕಿರುವ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ರಸ್ತೆ ದಾಟುತ್ತಿದ್ದ ವೃದ್ಧನೊರ್ವ ಎದುರಿಗೆ ಬಂದ ಬೈಕ್ ಸವಾರನಿಗೆ ಬೈಕ್ ನಿಧಾನಕ್ಕೆ ಓಡಿಸಪ್ಪಾ ಎಂದಿದ್ದಕ್ಕೆ ಏಕಾಏಕಿ ಬಂದು ಒಂದೇ ಏಟಿಗೆ ವೃದ್ಧನನ್ನ ಕೊಂದು ಹಾಕಿರುವ ಘಟನೆ ಹೈದರಾಬಾದ್ನ ಅಲ್ವಾಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೊಡೆದ ಏಟಿಗೆ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಗುರುವಾರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.