ಹೈದರಾಬಾದ್: ಇಲ್ಲಿನ ವಾರಸಿಗುಡದಲ್ಲಿ ಜಿ.ಹೆಚ್.ಎಂ.ಸಿ ಜಂಟಿ ಆಯುಕ್ತರಾದ ಜನಕರಾಮ್ ಅವರು ತಮ್ಮ ಕಚೇರಿಯಲ್ಲಿದ್ದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು ಈ ಕಾರಣಕ್ಕಾಗಿ ತಮ್ಮ ಪತ್ನಿಯಿಂದ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ವಿಷಯ ತಿಳಿದ ಜನಕರಾಮ್ ಅವರ ಪತ್ನಿ ಕಲ್ಯಾಣಿ ಅವರು ತಮ್ಮ ಸಂಬಂಧಿಕರೊಂದಿಗೆ ವಾರಸಿಗುಡದಲ್ಲಿರುವ ಅಪಾರ್ಟೆಂಟೆ ತೆರಳಿ ಜನಕರಾಮ್ ಅವರನ್ನು ಹಿಡಿದಿದ್ದಾರೆ.
ಕಲ್ಯಾಣಿ ಅವರು ಜನಕರಾಮ್ ಮತ್ತು ಆ ಮಹಿಳೆಯನ್ನು ನೋಡಿದ ತಕ್ಷಣ ಕೋಪಗೊಂಡಿದ್ದಾರೆ. ಈ ವೇಳೆ ಕಲ್ಯಾಣಿ ಮತ್ತು ಆಕೆಯ ಸಂಬಂಧಿಕರು ಜನಕರಾಮ್ ಮತ್ತು ಆ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಧ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆಯ ಬಗ್ಗೆ ವಾರಸಿಗುಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಲ್ಯಾಣಿ ಅವರು ತಮ್ಮ ಪತಿ ಜನಕರಾಮ್ ಅವರು ಜನಕರಾಮ್ ಅವರು ಜಿ.ಹೆಚ್.ಎಂ.ಸಿ ಆಡಳಿತ ವಿಭಾಗದಲ್ಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕಚೇರಿಯಲ್ಲಿದ್ದ ಮಹಿಳೆಯರೊಂದಿಗೆ ಈ ಹಿಂದೆ ಹಲವಾರು ಬಾರಿ ಅನೈತಿಕ ಸಂಬಂಧ ಹೊಂದಿದ್ದರು ಎಂದು ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ಜಿ.ಹೆಚ್.ಎಂ.ಸಿ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.