ಚಿಕ್ಕೋಡಿ: ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಮಜಲಟ್ಟಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಅಡಿಯಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಚಿಕ್ಕೋಡಿ ಇವರ ಸಹಯೋಗದಲ್ಲಿ “ವಿಶ್ವ ಪರಿಸರ ದಿನಾಚರಣೆ”ಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಲೇಜಿನ ಆವರಣದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ಕೈಗೊಂಡು ಪರಿಸರ ಜಾಗೃತಿ ಮೂಡಿಸಲಾಯಿತು. ಗಿಡಗಳನ್ನು ನೆಟ್ಟು ಸಸಿಗೆ ನೀರು ಹಾಕುವುದರ ಮುಖಾಂತರ ಕಾಲೇಜಿನ ಪ್ರಾಚಾರ್ಯರಾದ ಆನಂದ ಕೋಳಿ ಇವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
“ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗಾಣಿಸುವುದು” ಎಂಬ 2025 ರ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯವನ್ನು ವಿದ್ಯಾರ್ಥಿಗಳ ಗಮನಕ್ಕೆ ತರುತ್ತಾ, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರವೀಂದ್ರ ಕಾಗಲೆ ಅವರು ದಿನಬಳಕೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಲು ಶತ ಪ್ರಯತ್ನ ಮಾಡಬೇಕು. ಮಾರುಕಟ್ಟೆಗೆ ಹೋಗುವಾಗ ಎಲ್ಲಿಯ ಪ್ಲಾಸ್ಟಿಕ್ ರಹಿತ ಚೀಲಗಳನ್ನು ತೆಗೆದುಕೊಂಡು ಹೋಗುವುದನ್ನು ರೂಢಿಸಿಕೊಳ್ಳಬೇಕು. ಉಪಯೋಗಿಸಿದ ಪ್ಲಾಸ್ಟಿಕ್ ಚೀಲ, ಕವರ್, ಇತ್ಯಾದಿಗಳನ್ನು ಎಲ್ಲಿ ಬೇಕೆಂದರಲ್ಲಿ ಬಿಸಾಡದೇ ಸೂಕ್ತ ವಿಲೇವಾರಿ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಆನಂದ ಕೋಳಿ ಅವರು ಮಾತನಾಡುತ್ತಾ, ಶಾಲಾ-ಕಾಲೇಜುಗಳ ಒಳಾಂಗಣ ಮತ್ತು ಹೊರಾಂಗಣದಲ್ಲಿ, ಕೌಟುಂಬಿಕ ಪರಿಸರದಲ್ಲಿ ಸ್ವಚ್ಛತೆಯನ್ನು ಮತ್ತು ಶುಚಿತ್ವವನ್ನು ಕಾಪಾಡಿಕೊಳ್ಳಲು ಕರೆ ನೀಡಿದರು.
ಶ್ರವಣಕುಮಾರ್ ಸನದಿಯವರು ಪ್ರಾಸ್ತಾವಿಕ ನುಡಿಗಳ ನ್ನಾಡಿದರು. ಪ್ರತಿಭಾ ಕಳಸನ್ನವರ್ ಪ್ರಾರ್ಥಿಸಿದರು. ವೈಷ್ಣವಿ ಸ್ವಾಮೀ ಸ್ವಾಗತಿಸಿದರು. ಸೌಜನ್ಯ ಗರ್ಬುಡೆ ಮತ್ತು ಸಂಗಡಿಗರು ಎನ್ಎಸ್ಎಸ್ ಗೀತೆಯನ್ನು ಹಾಡಿದರು. ಹರ್ಷ ಕುರುಬರ ವಂದಿಸಿದರು. ಸಹನಾ ಕರಿಶೆಟ್ಟಿ ನಿರೂಪಿಸಿದರು. ಎನ್ಎಸ್ಎಸ್ ಕಾರ್ಯಕ್ರಮಾ ಅಧಿಕಾರಿಗಳಾದ ಎಚ್ಎಸ್ ಟಕ್ಕನ್ನವರ್ ಇವರು ಕಾರ್ಯಕ್ರಮ ಸಂಯೋಜಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಹಾರೋಗೊಪ್ಪ, ಸುಜಾತಾ ಪಾಟೀಲ್, ರವಿಚಂದ್ರ ಪಾಟೀಲ್, ವಿಶ್ವನಾಥ್ ಚೌಗಲಾ, ವನಿತಾ ಪ್ರಭು, ಸಂಜು ಮಿರ್ಜಿ, ಕಲ್ಲಪ್ಪ ಹೆಳವಿ, ಸುನಿಲ್ ಶೇಖನವರ್, ವಿಜಯ್ ಶೆಟ್ಟಿ , ಸತೀಶ್ ಯಶವಂತ್, ಪ್ರಶಾಂತ್ ವಾಲಿಕಾರ್ ಇನ್ನಿತರ ಉಪನ್ಯಾಸಕ ಬಳಗ ಹಾಗೂ NSS ಸ್ವಯಂಸೇವಕರು ಉಪಸ್ಥಿತರಿದ್ದರು.