Live Stream

[ytplayer id=’22727′]

| Latest Version 8.0.1 |

Local NewsNational NewsState News

ಬೆಂಗಳೂರಲ್ಲಿ ಲೈವ್ ವ್ಲಾಗ್ ಮಾಡ್ತಿದ್ದ ಯುವತಿಯ ಎದೆಭಾಗಕ್ಕೆ ಕೈ ಹಾಕಿದ ಯುವಕ! ಮುಂದೇನಾಯ್ತು ವಿಡಿಯೋ ನೋಡಿ

ಬೆಂಗಳೂರಲ್ಲಿ ಲೈವ್ ವ್ಲಾಗ್ ಮಾಡ್ತಿದ್ದ ಯುವತಿಯ ಎದೆಭಾಗಕ್ಕೆ ಕೈ ಹಾಕಿದ ಯುವಕ! ಮುಂದೇನಾಯ್ತು ವಿಡಿಯೋ ನೋಡಿ

 

ಬೆಂಗಳೂರು: ನಗರದ ಬಿಟಿಎಂ ಲೇಔಟ್‌ನಲ್ಲಿ ವಾಸವಾಗಿರುವ ಹಿಂದಿ ಭಾಷಿಕ ಯುವತಿ ರಸ್ತೆಯಲ್ಲಿ ಹೋಗುವಾಗ ವಿಡಿಯೋ ಮಾಡುವುದನ್ನು ನೋಡಿದ ಸೈಕಲ್ ಸವಾರ ಹುಡುಗನೊಬ್ಬ ಈ ಯುವತಿಯ ಎದೆಭಾಗವನ್ನ ಮುಟ್ಟಿ ಪರಾರಿ ಆಗಿದ್ದು, ಯುವತಿ ಕಣ್ಣೀರು ಹಾಕಿ ನೋವನ್ನ ಹೇಳಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಬೆಂಗಳೂರು ಯುವಕನಿಂದ ಕಿರುಕುಳಕ್ಕೆ ಒಳಗಾದ ಯುವತಿ ನೇಹಾ ಬಿಸ್ವಾಲ್. ಉತ್ತರ ಭಾರತದಿಂದ ಬಂದು ಬೆಂಗಳೂರಿನಲ್ಲಿ ವಾಸವಿದ್ದ ಈ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ರಜೆ ದಿನಗಳು ಹಾಗೂ ಕೆಲಸ ಮುಗಿಸಿ ಮನೆಗೆ ಹೋಗುವಾಗ ವ್ಲಾಗ್ ಮಾಡುತ್ತಾ ಹೋಗುತ್ತಿದ್ದಳು. ಈ ಯುವತಿ ಇನ್‌ಸ್ಟಾಗ್ರಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್ ಕೂಡ ಹೊಂದಿದ್ದಾರೆ. ಇನ್ನು ಬೆಂಗಳೂರಿನಲ್ಲಿರುವ ಪಬ್, ಕ್ಲಬ್, ಶಾಪಿಂಗ್ ಮಾಲ್ ಸೇರಿದಂತೆ ಕೋರಮಂಗಲ, ಬಿಟಿಎಂ ಲೇಔಟ್, ಮಡಿವಾಳ ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ವಿಶೇಷತೆಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುವ ಹವ್ಯಾಸ ಹೊಂದಿದ್ದಳು.

ಕಳೆದ ಸೋಮವಾರ ಕೆಲಸವನ್ನು ಮುಗಿಸಿಕೊಂಡು ತನ್ನ ರೂಮಿನತ್ತ ನಡೆದುಕೊಂಡು ಹೋಗುವಾಗ ಬಿಟಿಎಂ ಲೇಔಟ್‌ನಲ್ಲಿ ಸೆಲ್ಫಿ ವಿಡಿಯೋ ಚಿತ್ರೀಕರಿಸುತ್ತಾ ವ್ಲಾಗ್ ಮಾಡುತ್ತಿದ್ದಳು. ಎದುರಿಗೆ ಸೈಕಲ್‌ನಲ್ಲಿ ಬಂದ ಯುವಕನೊಬ್ಬ ಮೊದಲು ಈ ಯುವತಿಗೆ ಹಾಯ್ ಮಾಡುತ್ತಾನೆ. ನಂತರ, ಆಕೆಯ ಎದೆಗೆ ಕೈ ಹಾಕಿ ಕಿರುಕುಳ ಕೊಟ್ಟು ಪರಾರಿ ಆಗಿದ್ದಾನೆ. ಇನ್ನು ವಿಡಿಯೋದಲ್ಲಿ ಆತನ ಮುಖ ಕಾಣದಂತೆ ತಪ್ಪಿಸಿಕೊಂಡಿದ್ದಾನೆ. ಆದರೆ, ವಿಡಿಯೋದಲ್ಲಿ ಯುವಕ ಎದೆಭಾಗಕ್ಕೆ ಕೈ ಹಾಕಿ ಕಿರುಕುಳ ನೀಡಿರುವುದು ಸಹ ಸೆರೆಯಾಗಿದೆ.

ಬೆಂಗಳೂರು ನಗರದಲ್ಲಿ ಯುವತಿಯರಿಗೆ ಸುರಕ್ಷತೆ ಇಲ್ಲವೇ ಎಂಬ ಆತಂಕ ಜನರಲ್ಲಿ ಎದುರಾಗಿದೆ. ಯುವತಿ ಹೇಳುವ ಪ್ರಕಾರ, ಸೈಕಲ್‌ನಲ್ಲಿ ಬಂದ ಹುಡುಗನೊಬ್ಬ ನನಗೆ “ಹಾಯ್” ಎಂದು ಹೇಳಿ, ಇದ್ದಕ್ಕಿದ್ದಂತೆ ಎದೆ ಭಾಗಕ್ಕೆ ಮುಟ್ಟಿ ಕಿರುಕುಳ ನೀಡಿ ಸೈಕಲ್‌ನಲ್ಲಿ ಪರಾರಿಯಾಗಿದ್ದಾನೆ ಎಂದು ತನ್ನ ನೋವನ್ನು ಹೇಳಿಕೊಂಡಿದ್ದಾಳೆ.

ನೇಹಾ ತಮ್ಮ ವಿಡಿಯೋದಲ್ಲಿ ವಿವರಿಸಿದ ಘಟನೆ ಆನ್‌ಲೈನ್‌ನಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ತನ್ನ ಪೋಸ್ಟ್‌ನಲ್ಲಿ, ‘ಒಬ್ಬ ವ್ಯಕ್ತಿ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ. ನಾನು ಬ್ಲಾಗಿಂಗ್ ಮಾಡುತ್ತಿದ್ದಾಗ ಸೈಕಲ್‌ನಲ್ಲಿ ಬಂದು ಕೂಗಿ, ಅಸಭ್ಯವಾಗಿ ಸ್ಪರ್ಶಿಸಿ ಓಡಿಹೋದ ಎಂದು ವಿವರಿಸಿದ್ದಾರೆ. ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಒಬ್ಬಂಟಿಯಾಗಿ ನಡೆಯುವಾಗ ನಿಜವಾಗಿಯೂ ಸುರಕ್ಷಿತವಾಗಿರಬಹುದೇ ಎಂದು ಪ್ರಶ್ನಿಸಿದ್ದಾರೆ. ಯುವತಿಯ ಇನ್‌ಸ್ಟಾಗ್ರಾಮ್ ಪೋಸ್ಟ್ ಶೀಘ್ರ ವೈರಲ್ ಆಗಿದ್ದು, ಅನೇಕರು ಈ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ, ನೇಹಾ ಕಣ್ಣೀರಿಡುತ್ತಾ ತನಗಾದ ಅವಮಾನ ಮತ್ತು ಮರ್ಯಾದೆ ಹೋಗಿದ್ದನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾಳೆ.

ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವಾಗ ಮಹಿಳೆಯರು ಎದುರಿಸುತ್ತಿರುವ ಕಿರುಕುಳದ ಬಗ್ಗೆ ಯುವತಿ ನೇಹಾ ಒತ್ತಿ ಹೇಳಿದ್ದಾರೆ. ವಿಶೇಷವಾಗಿ ಇಂತಹ ಕಿರುಕುಳವು ರಸ್ತೆಯ ಮಧ್ಯ ಭಾಗದಲ್ಲಿಯೇ, ಭಯವಿಲ್ಲದೆ ಸಂಭವಿಸಿದಾಗ ಮಹಿಳೆಯರು ಒಬ್ಬಂಟಿಯಾಗಿ ಹೇಗೆ ಓಡಾಡಲು ಸಾಧ್ಯ ಎಂದು ಇಲ್ಲಿನ ಸುರಕ್ಷತೆಯ ಬಗ್ಗೆ ಜನ ಕಿಡಿಕಾರಿದ್ದಾರೆ.

 

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";