Live Stream

[ytplayer id=’22727′]

| Latest Version 8.0.1 |

Local News

ನಾವೂ ಪಾಸಾಗುವವರೇ” ಪ್ರೇರಣಾ ಕಾರ್ಯಾಗಾರ

ನಾವೂ ಪಾಸಾಗುವವರೇ” ಪ್ರೇರಣಾ ಕಾರ್ಯಾಗಾರ

ಬೆಳಗಾವಿ ,: ವಿದ್ಯಾರ್ಥಿಗಳು ಅಂದಿನ ವಿಷಯವನ್ನು ಅಂದAದೇ ಓದುತ್ತ ವಿಷಯಗಳನ್ನು ಮನನ ಹಾಗೂ ರೂಢಿ ಮಾಡಿಕೊಳ್ಳುತ್ತ ಹೋದಲ್ಲಿ ಒತ್ತಡವಿಲ್ಲದೇ ಪರೀಕ್ಷೆಯಲ್ಲಿ ಯಶಸ್ಸು ಸಾದಿಸಲು ಸಾಧ್ಯ. ಯಾವಾಗಲೂ ದೊಡ್ಡ ಯಶಸ್ಸನ್ನು ಸಾಧಿಸಬೇಕಾದಾಗ ನಿರಂತರವಾಗಿ ಚಿಕ್ಕ ಚಿಕ್ಕ ಪ್ರಯತ್ನಗಳನ್ನು ಮಾಡುತ್ತ ಹೋಗಬೇಕು ಎಂದು ಬೆಳಗಾವಿ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ ರಾಹುಲ ಶಿಂಧೆ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

        ಅವರು ನಗರದ ಸರ್ಕಾರಿ ಸರ್ದಾರ್ಸ ಪ್ರೌಢಶಾಲೆಯಲ್ಲಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಲೀಲಾವತಿ ಹಿರೇಮಠ ಅವರ ಆಶಯದಂತೆ ಈ ಸಾಲಿನ ಎಸ್.ಎಸ್.ಎಲ್.ಸಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ನಿಧಾನಗತಿಯ ಕಲಿಕಾ ಮಕ್ಕಳಿಗೆ ಹಮ್ಮಿಕೊಂಡಿದ್ದ “ನಾವೂ ಪಾಸಾಗುವವರೇ” ಎಂಬ ಮೊದಲ ಅಭಿಪ್ರೇರಣ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಲ್ಲ ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಉತ್ತಮ ಅಂಕಗಳೊAದಿಗೆ ಪಾಸಾಗುವಂತೆ ಶುಭ ಹಾರೈಸಿದರು.

ಕಾರ್ಯಾಗಾರದಲ್ಲಿ ನಗರದ ೦೭ ಪ್ರೌಢಶಾಲೆಗಳ ೧೬೪ ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದು, ಕನ್ನಡ ಭಾಷೆ, ಇಂಗ್ಲೀಷ್ ಭಾಷೆ, ವಿಜ್ಞಾನ ಹಾಗೂ ಗಣಿತದಲ್ಲಿ ಮೊದಲ ಎರಡು ತಿಂಗಳ ಪಠ್ಯದಲ್ಲಿ ಸುಲಭವಾಗಿ ಹೆಚ್ಚು ಅಂಕ ಗಳಿಸುವ ತಂತ್ರಗಳ ಕುರಿತು ಚರ್ಚಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ರವಿ ಹಲಕರ್ಣಿ, ಅಲ್ತಾಫ್ ಜಹಾಂಗೀರ, ಶ್ರೀ ಅಂಗಡಿ ಹಾಗೂ ಶ್ರೀಮತಿ ಎಸ್.ಎ ಕಲಕೇರಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಪ್ರಾಚಾರ್ಯ ಶ್ರೀ ಶಿವಶಂಕರ ಹಾದಿಮನಿ ವಹಿಸಿಕೊಂಡಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಶ್ರೀ ಐ.ಡಿ ಹಿರೇಮಠ ಹಾಗೂ ಪಿ.ಯು ಪ್ರಾಚಾರ್ಯ ಶ್ರೀ ವೈ.ಎಂ ಪಾಟೀಲ ಉಪಸ್ಥಿತರಿದ್ದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";