ಬೆಳಗಾವಿ: ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಲಾ, ವಾಣಿಜ್ಯ ಹಾಗೂ ಪದವಿ ಮಹವಿದ್ಯಾಲಯ ಶಿವಬಸವ ನಗರ ಬೆಳಗಾವಿ, 2024-25 ನೆಯ ಸಾಲಿನ ಬಿ. ಎ, ಬೀ. ಕಾಮ್ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವಿವಿಧ ಸಾಂಸ್ಕೃತಿಕ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮದಲ್ಲಿ, ಶ್ರೀಮತಿ ಸ್ವಪ್ನಾ ಜೋಷಿ (ವಿಜ್ಞಾನ ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯರು), ಎಸ್.ಪಿ ಹಿರೇಮಠ (ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ), ಸಿದ್ದರಾಮ ರೆಡ್ಡಿ (ಪ್ರಾಚಾರ್ಯರು), ರವಿರಾಜ ಖೋತ (ಉಪಪ್ರಾಚಾರ್ಯರು), ಬೋಧಕ, ಭೋದಕೆತರ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.