ರಾಯಬಾಗ: ಡಿ.02, 2024 ರಂದು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಯಬಾಗ ದಿಂದ ಬ್ಯಾಕೂಡ ಮುಖ್ಯ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯ ( SSDP ) ಯೋಜನೆಯಡಿ ಮಾನ್ಯ ಲೋಕೋಪಯೋಗಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಸತೀಶ್ ಜಾರಕಿಹೊಳಿ ಅವರ ಅನುದಾನದಲ್ಲಿ ಕಾಮಗಾರಿಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಯಬಾಗ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಮಹಾವೀರ ಲ. ಮೋಹಿತೆ ಭೂಮಿ ಪೂಜೆ ಗುದ್ದಲಿ ಪೂಜೆ ನೆರವೇರಿಸಿ ಈ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಅಪ್ಪಾಸಾಬ ಕುಲಗುಡೆ, ಕೆಪಿಸಿಸಿ ಸದಸ್ಯರಾದ ದಿಲೀಪ ಜಮಾದಾರ, ಗ್ಯಾರಂಟಿಗಳ ಅಧ್ಯಕ್ಷರಾದ ಅಜು೯ನ ಬಂಡಗರ, ನಗರ ಅಧ್ಯಕ್ಷರಾದ ಹಾಜಿ ಮುಲ್ಲಾ, ಕೆಡಿಪಿ ಸದಸ್ಯರಾದ ಮಹಾದೇವ ನಾಯಿಕ, ಶ್ರವಣಕುಮಾರ ಕಾಂಬಳೆ, ಹಿರಿಯ ಮುಖಂಡರಾದ ಸತ್ತಾರ ಮುಲ್ಲಾ, ಜ್ಯೋತಿ ಕೆಂಪಟ್ಟಿ, ಸನೀಲ ಜಾಧವ, ರಾಜು ಮುರಚಟ್ಟಿ, ನಾಮದೇವ ಕಾಂಬಳೆ, ನಾಮನಿರ್ದೇಶಿತ ಸದಸ್ಯರಾದ ಕಿರಣ ಕಾಂಬಳೆ, ದಿಲೀಪ ಪಾಯನ್ನವರ, ಸಂಪನ್ನಿಲ ನಾಯಿಕ, ಕಾಡೇಶ ಐಹೋಳೆ, ಸುರೇಶ್ ಕಾಂಬಳೆ, ಪ್ರತೀಭಾ ಕಾಂಬಳೆ, ತನುಜಾ ಶಿಂಗೆ, ಮುತ್ತಪ್ಪ ಬಬಲೇಶ್ವರ, ಭೀಮಪ್ಪ ಕಾಂಬಳೆ, ಶೈಲಜಾ ಕರಿಬಿಂಮ್ಮಗೋಳ, ಗಂಗಾಧರ ದಿಗ್ಗೇವಾಡಿ, ಮಂಜುನಾಥ್ ಕಾಂಬಳೆ, ಪ್ರೇಮ ಕಾಂಬಳೆ, ಮಿಲಿಂದ್ ಚಿಂಚಲಿಕರ ಹಾಗೂ ಮುಂಚೂಣಿ ಘಟಕದ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಮುಖಂಡರು ಕಾಯ೯ಕತ೯ರು ಗ್ರಾಮಸ್ಥರು ಉಪಸ್ಥಿತರಿದ್ದರು.