Live Stream

[ytplayer id=’22727′]

| Latest Version 8.0.1 |

State News

ಜ್ಯೋತಿ ಸೆಂಟ್ರಲ್ ಶಾಲೆಯಲ್ಲಿ ಶಿಕ್ಷಕರಿಗೆ ಕಾರ್ಯಾಗಾರ

ಜ್ಯೋತಿ ಸೆಂಟ್ರಲ್ ಶಾಲೆಯಲ್ಲಿ ಶಿಕ್ಷಕರಿಗೆ ಕಾರ್ಯಾಗಾರ

ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯು ನಡೆಸುತ್ತಿರುವ ಜ್ಯೋತಿ ಸೆಂಟ್ರಲ್ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಸಂದರ್ಭದಲ್ಲಿ, ದಿನಾಂಕ 31 ಮೇ 2025 ರ ಶನಿವಾರದಂದು ಸಿ.ಬಿ.ಎಸ್. ಇ ಶಿಕ್ಷಕರಿಗಾಗಿ “ಡ್ರೈವ್ ಯುವರಸೆಲ್ಫ ಅನ್ಲಾಕಿಂಗ್ ಲಿಮಿಟ್ಸ ಟು ಮೋಟಿವೇಶನ್” ಎಂಬ ವಿಷಯದ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಮುಕ್ತಾಂಗಣ ಶಾಲೆಯ ಅಧ್ಯಕ್ಷರಾದ ಶ್ರೀ ಆರ್.ವೈ. ಪಾಟೀಲ್ ಅವರು ಈ ಕಾರ್ಯಾಗಾರದ ಪರಿಣಾಮಕಾರಿ ಮತ್ತು ಸ್ಪೂರ್ತಿದಾಯಕ ಭಾಷಣಕಾರರಾಗಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಶಾಲೆಯ ಎಸ್.ಎಂ.ಸಿ. ಸಮಿತಿಯ ಅಧ್ಯಕ್ಷರು ನಿವೃತ್ತ ಪ್ರಾಂಶುಪಾಲರು ಆರ್.ಕೆ. ಪಾಟೀಲ್ ಸರ್, ಹಾಗೂ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಾಲಿ ಕಂಗ್ರಾಳ್ಕರ್ ಮೇಡಂ, ಹಾಗೂ ಜ್ಯೋತಿ ಸೆಂಟ್ರಲ್ ಶಾಲೆಯ ಸಂಪೂರ್ಣ ಬೋಧನಾ ಸಿಬ್ಬಂದಿ ಉಪಸ್ಥಿತರಿದ್ದರು. ಶ್ರೀ ಆರ್.ವೈ. ಪಾಟೀಲ್ ಸರ್, ಕಾರ್ಪೊರೇಟ್ ಕೆಲಸದ ಅತ್ಯುತ್ತಮ ಅನುಭವವನ್ನು ಹಂಚಿಕೊಳ್ಳುತ್ತಾ, ನಮ್ಮ ಶೈಕ್ಷಣಿಕ ಕೆಲಸಕ್ಕೆ ಕಾರ್ಪೊರೇಟ್ ಜ್ಞಾನವನ್ನು ಹೇಗೆ ಬಳಸಬಹುದು ಎಂಬುದನ್ನು ವಿವರಿಸುತ್ತಾ, “ಒಬ್ಬ ಸಿವಿಲ್ ಇಂಜಿನಿಯರ್ ತಪ್ಪು ಮಾಡಿದರೆ, ನೂರಾರು ಜನರು ಅದನ್ನು ಸರಿದೂಗಿಸಬೇಕು, ಸಾವಿರಾರು ಜನರು ವೈದ್ಯರ ತಪ್ಪಿಗೆ ಪರಿಹಾರ ನೀಡಬೇಕು, ಆದರೆ ಶಿಕ್ಷಕರು ಮಾರ್ಗದರ್ಶನ ಮಾಡುವಾಗ ತಪ್ಪು ಮಾಡಿದರೆ, ಆ ತಪ್ಪಿನ ಪರಿಣಾಮಗಳನ್ನು ತಲೆಮಾರುಗಳು ಅನುಭವಿಸಬೇಕಾಗುತ್ತದೆ” ಎಂದು ಹೇಳಿದರು. ಸರ್ ತಮ್ಮ ಅತ್ಯುತ್ತಮ ವೈಯಕ್ತಿಕ ಅನುಭವವನ್ನು ಹಂಚಿಕೊಳ್ಳುವ ಮೂಲಕ ಎಲ್ಲಾ ಶಿಕ್ಷಕರಿಗೆ ಸ್ಫೂರ್ತಿ ನೀಡಿದರು.

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

";