ಹುಕ್ಕೇರಿ: ತಾಲೂಕಿನ ಹಿಡಕಲ್ ಡ್ಯಾಂ ಬಳಿಯ ಶಕ್ತಿ ಸದನ ಪುನರ್ವಸತಿ ಕೇಂದ್ರದಲ್ಲಿ ಜೂನ್ 21ರಂದು ವಿಶ್ವ ಪರಿಸರ ದಿನ ಮತ್ತು ಅಂತರಾಷ್ಟ್ರೀಯ ಯೋಗ ದಿನಾಚರಣೆ ಒಂದೇ ವೇದಿಕೆಯಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಈ ಕಾರ್ಯಕ್ರಮವನ್ನು ಮಹಿಳಾ ಕಲ್ಯಾಣ ಸಂಸ್ಥೆಯ ಶಕ್ತಿ ಸದನ ಪುನರ್ವಸತಿ ಕೇಂದ್ರ – ಹಿಡಕಲ್ ಡ್ಯಾಂ ಮತ್ತು ಕರ್ನಾಟಕ ಪತ್ರಕರ್ತರ ಸಂಘದ ಹುಕ್ಕೇರಿ ತಾಲೂಕ ಘಟಕ ಇವರುಗಳು ಸಂಯುಕ್ತವಾಗಿ ಆಯೋಜಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹತ್ತರಗಿಯ ಪರಮಪೂಜ್ಯ ಡಾ. ಆನಂದ ಮಹಾರಾಜರು (ಗೋಸಾವಿ ಹರಿಮಂದಿರ) ಹಾಗೂ ಸಂತ್ ಮೀಖಾಯಿಲ್ ಚರ್ಚ್ – ಹಿಡಕಲ್ ಡ್ಯಾಂದ ಧರ್ಮಗುರು ಫಾದರ್ ಲೂರ್ದುಸ್ವಾಮಿ ದಿವ್ಯ ಸಾನಿಧ್ಯ ನೀಡಲಿದ್ದಾರೆ. ಕಾರ್ಯಕ್ರಮವನ್ನು ವಲಯ ಅರಣ್ಯಾಧಿಕಾರಿ ಬಿ.ಎಲ್. ಸನದಿ (ಹುಕ್ಕೇರಿ) ಉದ್ಘಾಟನೆ ಮಾಡಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಪತ್ರಕರ್ತರ ಸಂಘ – ಹುಕ್ಕೇರಿ ಘಟಕದ ಅಧ್ಯಕ್ಷರು ಹಾಗೂ ಯಮಕನಮರಡಿ ಲಕ್ಷ್ಮಿ ಅರ್ಬನ್ ಕೋ-ಆಪರೇಟಿವ್ ಸೊಸೈಟಿಯ ಸಂಸ್ಥಾಪಕರಾದ ಶ್ರೀ ರವೀಂದ್ರ ಜಿಂಡ್ರಾಳಿ ವಹಿಸಲಿದ್ದಾರೆ.
ಅತಿಥಿಗಳಾಗಿ:
- ನಿವೃತ್ತ ಪ್ರಾಧ್ಯಾಪಕ ಪಿ.ಜಿ. ಕೊಣ್ಣೂರ
- ಸಿಡಿಪಿಓ ಹರಿಪ್ರಸಾದ್ ಪಿ. (ಹುಕ್ಕೇರಿ)
- ಯರಗಟ್ಟಿ ಪಿಯು ಕಾಲೇಜಿನ ಪ್ರಾಚಾರ್ಯ ಕಿರಣ ಚೌಗಲಾ
- ಪತ್ರಕರ್ತರು: ಸಂಜು ಮುತಾಲಿಕ, ಸಂಜೀವ ಮುಷ್ಟಗಿ
- ಪತ್ರಕರ್ತರ ಸಂಘದ ಉಪಾಧ್ಯಕ್ಷ ನಂದಕೀಶೋರ್ ಗೌಡರ
- ಮಾಜಿ ಸೈನಿಕ ಹಾಗೂ ಯೋಗ ಪಟು ಆನಂದ ಜರಳಿ (ರುಸ್ತುಂಪುರ)
- ಹೊಸಪೇಟೆ ಗ್ರಾ.ಪಂ ಸದಸ್ಯ ಸದಾನಂದ ಮಾಳ್ಯಾಗೋಳ
ಅಲ್ಲದೆ ಸ್ಥಳೀಯ ಗ್ರಾಮಸ್ಥರು ಸಹ ಆಗಮಿಸಲಿದ್ದಾರೆ.
ಈ ಕುರಿತು ಪತ್ರಕರ್ತರ ಸಂಘದ ಹುಕ್ಕೇರಿ ಘಟಕದ ಪ್ರಧಾನ ಕಾರ್ಯದರ್ಶಿ ಎ.ವೈ. ಸೋನ್ಯಾಗೋಳ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ವರದಿ: ಎ.ವೈ. ಸೋನ್ಯಾಗೋಳ
📞 ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ.