ಹುಕ್ಕೇರಿ: ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಕೆರೂರು ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ಅಡಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತವಾಗಿ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಟ್ಟು ಸಸಿಗೆ ನೀರು ಹಾಕುವುದರ ಮುಖಾಂತರವಾಗಿ ಕಾಲೇಜಿನ ಪ್ರಾಚಾರ್ಯರಾದ ಶ್ರೀಶೈಲ ಕೋಲಾರ ಅವರು ಉದ್ಘಾಟನೆ ಮಾಡಿದರು.
2025 ರ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ ” ಪ್ಲಾಸ್ಟಿಕ್ ಮಾಲಿನ್ಯವನ್ನು ಮುಕ್ತಗೊಳಿಸುವುದು ” ( Putting an End to plastic pollution ) ಅಂದರೆ ನಮ್ಮ ದಿನನಿತ್ಯದ ಬದುಕಿನಲ್ಲಿ ಮತ್ತು ಸಾರ್ವಜನಿಕ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ, ಮತ್ತು ಉಪಯೋಗಿಸಿದ ಪ್ಲಾಸ್ಟಿಕ್ ಚೀಲಗಳನ್ನು ಎಲ್ಲಿ ಬೇಕೆಂದರಲ್ಲಿ ಬಿಸಾಡುವುದನ್ನು ನಿಲ್ಲಿಸುವುದು, ಅದರ ಜೊತೆಗೆ ಪ್ಲಾಸ್ಟಿಕ್ ಬಳಸುವುದಿಲ್ಲ ಎಂಬ ದೃಢ ಮನಸ್ಸನ್ನು ಹೊಂದುವದು ಅತಿ ಅವಶ್ಯಕ ಕಾರಣ ಪ್ಲಾಸ್ಟಿಕ್ ಅತಿಯಾದ ಬಳಕೆಯಿಂದ ಮಣ್ಣು ಮಾಲಿನ್ಯ ಜಲ ಮಾಲಿನ್ಯ ತಾಪ ಮಾಲಿನ್ಯಗಳಂತ ಹಲವಾರು ಸಮಸ್ಯೆಗಳು ತೆಲೆದೋರಿ ಜೀವಸಂಕುಲಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ, ಭವಿಷ್ಯತ್ತಿನ ದಿನಗಳಿಗೆ ಉತ್ತಮ ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಅಷ್ಟೇ ಅಲ್ಲದೆ ಮನುಷ್ಯ ಪರಿಸರದ ಕೂಸು ಆದರೆ ಇಂದು ತನ್ನ ದುಷ್ಟ ಆಲೋಚನೆ ಮತ್ತು ಸ್ವಾರ್ಥ ಸಾಧನೆಗೋಸ್ಕರ ಪರಿಸರದ ಮೇಲೆ ಅತಿಕ್ರಮಣ ಮತ್ತು ದುಷ್ಕೃತ್ಯಗಳನ್ನು ಮಾಡುತ್ತಿರುವುದರಿಂದ ಇಂದು ಪರಿಸರ ಹಾನಿ ಆಗುತ್ತಿರುವುದು ನಮ್ಮೆಲ್ಲರಿಗೂ ಕೇದಕರ ಎಂದು ಹೇಳಿದರು.
ಕೇವಲ ಪರಿಸರ ದಿನಾಚರಣೆ ದಿವಸ ಗಿಡ ನೆಟ್ಟು ಫೋಟೋಕೆ ಪೋಸು ನೀಡಿ ಹೋಗುವುದು ಅಷ್ಟೇ ಅಲ್ಲದೆ ಹಚ್ಚಿದ ಗಿಡವನ್ನು ಪೋಷಿಸಿ ಬೆಳೆಸ ಬೇಕಾಗಿರುವುದು ಅಷ್ಟೇ ಮುಖ್ಯವಾಗಿರುತ್ತದೆ, ಪರಿಸರದ ಬಗ್ಗೆ ಇರುವ ಕಾಳಜಿ ಕೇವಲ ಭಾಷಣಕ್ಕೆ ಸೀಮಿತವಾಗಿರದೆ ನಮ್ಮ ದಿನನಿತ್ಯ ಜೀವನದಲ್ಲಿ ಪರಿಸರಕ್ಕೆ ಪೂರಕವಾಗಿ ಜೀವಿಸುವುದು ಅಷ್ಟೇ ಮಹತ್ವ ಅಂದಾಗ ಮಾತ್ರ ನಾವು ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಲಿಕ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಪ್ರಾಚಾರ್ಯರಾದ ಎಂ. ಆರ್ ಬಾಗಾಯಿ, ಕಾರ್ಯಕ್ರಮ ಅಧಿಕಾರಿಗಳಾದ ಎಸ್. ಎಂ ತೇಲಿ, ಎಸ್.ಎಂ. ಕುಲಕರ್ಣಿ, ಎ. ಟಿ. ಬಾನೆ, ಸಂಜೀವ ಮಾನೆ, ಪ್ರತಿಭಾ ವಟ್ನಾಳ್, ಕವಿತಾ ಮಾಲಬಣ್ಣವರ್ ಹಾಗೂ ಎಲ್ಲ ಸ್ವಯಂಸೇವಕರು ಉಪಸ್ಥಿತರಿದ್ದರು.