ಮೂಡಲಗಿ: ಕನ್ನಡ ಸಾಹಿತ್ಯ ಪರಿಷತ್ತು, ಮೂಡಲಗಿ ತಾಲೂಕಾ ಘಟಕ ಮತ್ತು ಜ್ಞಾನದೀಪ್ತಿ ಫೌಂಡೇಶನ್ ಮೂಡಲಗಿ ಇವುಗಳ ಸಹಯೋಗದಲ್ಲಿ ಜೂನ್ 22, 2025 ರಂದು ಶ್ರೀ ಹನುಮಾನ್ ಮಂದಿರದ ಸಭಾಭವನದಲ್ಲಿ ವಿಶ್ವ ಸಂಗೀತ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಸಂಗೀತ ಶಿಕ್ಷಕ ಸೋಮಶೇಖರಯ್ಯ ಕಂಠಿಕಾರಮಠ ಅವರು, “ಸಂಗೀತವು ಪದಗಳಲ್ಲಿ ವ್ಯಕ್ತಪಡಿಸಲಾಗದ ಭಾವನೆಗಳನ್ನು ತಲುಪಿಸುತ್ತದೆ. ಇದು ಖಿನ್ನತೆ, ಚಿಂತೆಗಳಿಂದ ಹೊರಬರಲು ಮಾನವಸಮಾಜಕ್ಕೆ ಸಹಕಾರಿಯಾಗುತ್ತದೆ. ಇಂದು ಸಂಗೀತವು ವಿಶ್ವಭಾಷೆಯಾಗಿ ಪ್ರಭಾವ ಬೀರುತ್ತಿದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶ್ರೀ ಪ್ರಶಾಂತ ಮಲ್ಲನಗೌಡರ, ಅರ್ಜುನ ಕಾಂಬಳೆ, ಮಾರುತಿ ಗೌಡರ ಹಾಗೂ ಕು. ಪಲ್ಲವಿ ಇವರು ತಮ್ಮ ನಾದಸೇವೆಯ ಮೂಲಕ ಶ್ರೋತೃಗಳನ್ನು ಭಾವನಾವೇಶಕ್ಕೆ ಒಳಪಡಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕದ ಅಧ್ಯಕ್ಷರಾದ ಡಾ. ಸಂಜಯ ಅ. ಶಿಂದಿಹಟ್ಟಿ ವಹಿಸಿದ್ದರು. ಕಾರ್ಯದರ್ಶಿ ಬಿ.ಆರ್. ತರಕಾರ ಪ್ರಾಸ್ತಾವಿಕ ಭಾಷಣ ನೀಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಎ.ಎಚ್. ವಂಟಗುಡಿ ಅವರು ಆತಿಥ್ಯ ಸ್ವಾಗತ ನೀಡಿದ್ದು, ಸುರೇಶ ಲಂಕೇಪ್ಪನವರ ನಿರೂಪಣೆಯನ್ನು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮಹಾವಿರ ಸಲ್ಲಾಗೋಲ, ಸಂತೋಷ ಪಾಟೀಲ, ತಿಮ್ಮಣ್ಣ ಯಾದವಾಡ, ಅಪ್ಪಣ್ಣ ಮುಗಳಖೊಡ, ವೆಂಕಟೇಶ್ ಬಡಿಗೇರ, ವೀರಭದ್ರಪ್ಪ ಮಿಲಾನಟ್ಟಿ ಮತ್ತು ಶ್ರೀಮತಿ ಭಾಗೀರಥಿ ಕುಳಲಿ ಉಪಸ್ಥಿತರಿದ್ದರು.
ಸಂಗೀತ ದಿನಾಚರಣೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.