ಬೆಳಗಾವಿ: ನಗರದ ಕರ್ನಾಟಕ ನಾಟಕ ಅಕಾಡೆಮಿ, ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಗುರುವಾರ ವಿಶ್ವ ರಂಗಭೂಮಿ ದಿನಾಚರಣೆ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿಯವರು ಜೀವನವೇ ಒಂದು ಕಲೆಯಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದ ಕಲೆ ಹೊಂದಿರುತ್ತಾರೆ. ಅದನ್ನು ಗುರುತಿಸಬೇಕೆಂದು ಹೇಳಿದರು.
ತದನಂತರ, ಸಾಹಿತಿ ನಾಟಕಕಾರ ಥಿಯೊಡರಸ್ ಟರ್ಜೋಪೌಲಸ್ ಅವರ ಈ ವರ್ಷದ ವಿಶ್ವ ರಂಗಭೂಮಿ ಸಂದೇಶದ ಕುರಿತು ಕರ್ನಾಟಕ ನಾಟಕ ಅಕಾಡಮಿಯ ಸದಸ್ಯರಾದ ಬಾಬಾ ಸಾಹೇಬ್ ಕಾಂಬಳೆಯವರು ವಿಶ್ವ ರಂಗ ಸಂದೇಶವನ್ನ ಓದಿದರು.
ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಎಂ.ಜಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ, ಪಾರಿಜಾತ ಕಲಾವಿದ ಗೋಕಾಕನ ಈಶ್ವರ ಚಂದ್ರ ಬೆಟಗೇರಿ ಪಾರಿಜಾತದ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು.
ತದ ನಂತರ, ಬೆಳಗಾವಿಯ ಆರ್.ಪಿ.ಡಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಚ್.ಬಿ ಕೋಲಕಾರ ಅವರು ಮಾತನಾಡಿ, ಆಧುನಿಕ ಕನ್ನಡ ರಂಗ ವಿಭೂಮಿಯ ಕುರಿತು ಸುದೀರ್ಘ ಇತಿಹಾಸ ಮತ್ತು ಆಧುನಿಕ ಯುಗದಲ್ಲಿ ಕನ್ನಡ ರಂಗಭೂಮಿಯ ನಿಲುವಿನ ಬಗ್ಗೆ ಮಾಹಿತಿ ನೀಡಿದರು.
ನಂತರ, ದುಳಗಣವಾಡಿ ರಂಗದರ್ಶನ ಕಲಾತಂಡ ಬೀದಿ
ನಾಟಕ ಪ್ರದರ್ಶಿಸಿತು. ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಯುವರಂಗ ತಂಡದ ಕಲಾವಿದರು ರಂಗ ಗೀತೆ ಹಾಡಿ ಮನರಂಜಿಸಿದರು.
ಆನಂತರ, ರಂಗ ಸಂಪದದ ಹಿರಿಯ ರಂಗ ಸಂಘಟಕರಾದ ರಾಮಚಂದ್ರ ಕಟ್ಟಿ ಹಾಗೂ ಹಿರಿಯ ರಂಗ ಕಲಾವಿದರಾದ ರಮೇಶ ಅನಿಗೋಳ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು.
ರಂಗಕರ್ಮಿ ರಾಜು ಮಠಮತಿ, ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ರೇಡಿಯೋ ನಿರೂಪಕರಾದ ಶ್ವೇತಾ ಬಿ.ಕೆ., ಚೇತನ ಕುಲಕರ್ಣಿಯವರು ನಿರೂಪಿಸಿದರು.
ವಿದ್ಯಾವತಿ ಭಜಂತ್ರಿ, ಪ್ರೊ.ಎಂ.ಜಿ.ಹೆಗಡೆ, ಡಾ.ಎಚ್.ಬಿ.ಕೋಲಕಾರ, ರಾಜು ಮಠಮತಿ, ಸ್ಟಿಫನ್ ಜೇಮ್ಸ್, ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರದ ರೇಡಿಯೋ ನಿರೂಪಕರಾದ ಶ್ವೇತಾ ಬಿ.ಕೆ., ಚೇತನ ಕುಲಕರ್ಣಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.