ಎಲ್ಲೆಲ್ಲೂ ಹರಿವ ಜೀವಜಲ ಸಿಂಧು
ದಾಹ ನೀಗುವ ಅಮೃತದ ಬಿಂದು
ಓ ನೀರೇ ಸಕಲ ಜೀವರಾಶಿಗೂ ನೀನೇ ಬಂಧು
ನೀರು ನೀನಿಲ್ಲದಿರೆ ಸಾವೇ ಬರುವುದು ನಮಗಂದು
ನಿನ್ನಯ ಮಹಿಮೆ ಅರಿಯದಿರೆ ಕಾದಿಹುದು ಕುತ್ತು
ನಿನ್ನಯ ಸದ್ಬಳಕೆ ಮಾಡದಿರೆ ಬರುವುದು ಆಪತ್ತು
ಅಭಿವೃದ್ಧಿಯ ನೆಪದಲ್ಲಿ ಕಾರ್ಖಾನೆಯ ಕಟ್ಟಿ
ಪರಿಶುದ್ಧ ನೀರನು ಮಲಿನಗೊಳಿಸಿ
ದೇವರ ನೆಪದಲ್ಲಿ ಜಾತ್ರೆಯ ಮಾಡಿ
ದೈವ ಭೂತಗಳ ನಂಬಿಕೆಯಲಿ ತೊಳಲಾಡಿ
ಪವಿತ್ರ ಗಂಗೆ ತುಂಗೆಯಲ್ಲಿ ಪಾಪ ತೊಳೆಯಲು ಮಿಂದು
ಸತ್ತ ಹೆಣಗಳನು ನೀರಲ್ಲಿ ಚಲ್ಲಿ
ನದಿ ತಟದ ಸ್ವಗ೯ವನು ನರಕ ಸಾದೃಶ್ಯವಾಗಿಸಿ
ಉಟ್ಟುಡುಗೆಗಳನು ಪಾಪ ತೊಳೆಯುವ ನೆಪದಿ ಕಳಚಿ
ದೇವರ ಹೆಸರಲ್ಲಿ ಕೇಶಗಳನು ಕಳಚಿ
ಕುಡಿಯುವ ಜಲರಾಶಿಯನು ವಿಷಮಯವಾಗಿಸಿ
ಹರಿವ ನಲ್ಲಿಯ ನೀರನು ಹರಿಯಲು ಬಿಟ್ಟು
ನೋಡಿಯೂ ನೋಡದಂತಹ ಮೂಢರನು ಕಾಣು
ಕುಡಿವ ನೀರಿನ ಪೈಪು ಒಡೆದು ಚರಂಡಿಯ ಕಲ್ಮಶವ ಸೇರಿ
ನೂರಾರು ರೋಗಗಳ ದಾರಿಯನು ಸೃಷ್ಟಿಸಿ
ನಗರದಲಿ ನೀರು ಅಮೃತವಾಗಿಹುದು ನೋಡು
ಓ ಮನುಜ ಇನ್ನಾದರೂ ತಿಳಿ
ಹನಿ ನೀರನು ಹಾನಿ ಮಾಡದೆ ಜಲರಕ್ಷಿಸು
ಮುಂಬರುವ ಪೀಳಿಗೆಯನು ನೀನುಳಿಸು
ನೀರೇ ಜಲದೈವನೆಂದು ಭಜಿಸು
ನಾರಾಯಣ ರಾಮಪ್ಪ ರಾಠೋಡ್
ಉಪನ್ಯಾಸಕರು