ಬೆಳಗಾವಿ: ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಜೈನ್ ಹೆರಿಟೇಜ್ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಾಂತಾಯಿ ವೃದ್ಧಾಶ್ರಮ, ಕುಟ್ಟಲವಾಡಿ, ಬೆಳಗಾವಿಯಲ್ಲಿ ಯೋಗ ಅಭ್ಯಾಸ ಶಿಬಿರವನ್ನು ಆಯೋಜಿಸಿದರು.
ಈ ಕಾರ್ಯಕ್ರಮದ ಮೂಲಕ ಆರೋಗ್ಯ, ಮನಶ್ಶಾಂತಿ ಮತ್ತು ಸಮುದಾಯ ಸೇವೆಯ ಮಹತ್ವವನ್ನು ಮಕ್ಕಳಿಗೆ ತಿಳಿಸಿ, “ಒಂದು ಭೂಮಿ, ಒಂದು ಆರೋಗ್ಯ” ಎಂಬ ತತ್ವಕ್ಕೆ ಸಾಕಾರ ನೀಡಲಾಯಿತು.
ಯೋಗ ಗುರು ಶ್ರೀಮತಿ ಪಲ್ಲವಿ ನಾಡಕರ್ಣಿ, ಆಯುಷ್ ಇಲಾಖೆಯ ಶ್ರೀಮತಿ ಕಲ್ಪನಾ ಹಾಗೂ ಶಾಂತಾಯಿ ವೃದ್ಧಾಶ್ರಮದ ಸಂಸ್ಥಾಪಕರಾದ, ವಿಜಯ ಮೊeರೆ ಅವರ ಮಾರ್ಗದರ್ಶನದಲ್ಲಿ ಈ ಶಿಬಿರ ಯಶಸ್ವಿಯಾಗಿ ನಡೆಯಿತು.
ಇದು ಮಕ್ಕಳು ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಳ್ಳಲು ಹಾಗೂ ಆರೋಗ್ಯಪೂರ್ಣ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಹಾಯಮಾಡುವ ಪ್ರಯತ್ನವಾಗಿತ್ತು.