ಕೋಲ್ಕತ್ತಾ: ಇಲ್ಲಿನ ಒಂದು ದುರ್ಗಾ ಪೂಜೆಗೆ ಕೊಲ್ಕತ್ತಾ ಮಾಡೆಲ್ ಹಾಕಿ ಬಂದಿದ್ದ ಅರೆಬರೆ ಬಟ್ಟೆಗೆ ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.
ಮಿಸ್ ಕೋಲ್ಕತ್ತಾ 2016ರ ವಿಜೇತೆ ಹೇಮೋಶ್ರೀ ಭದ್ರಾ ಎನ್ನುವ ಮಾಡೆಲ್ ಕೋಲ್ಕತ್ತಾದ ದುರ್ಗಾ ದೇವಿ ಪ್ಯಾಂಡಲ್‌ನಲ್ಲಿ ತನ್ನ ಇಬ್ಬರು ಸ್ನೇಹಿತರ ಜೊತೆಗೆ ಪೋಸ್ ನೀಡುತ್ತಿರುವ ಫೋಟೋಗಳು ತಮ್ಮ ಸಾಮಾಜಿಕ ಜಾಲತಾಣದ ಖಾತೆಗೆ ಹಾಕಿಕೊಂಡಿದ್ದರು.
https://www.instagram.com/p/DA72DoHTaSq/?igsh=ZTNheTVkZ3Q4M2Rz
ವೈರಲ್ ಆದ ಈ ಫೋಟೋದಲ್ಲಿ ಮೂವರು ಹುಡುಗಿಯರು ದುರ್ಗಾದೇವಿಯ ಪೆಂಡಲ್‌ನಲ್ಲಿ ನಿಂತಿದ್ದಾರೆ. ದುರ್ಗಾದೇವಿಯ ಮುಂದೆ ನಿಂತು ಪೋಸ್ ನೀಡುತ್ತಿದ್ದಾರೆ. ಆದರೆ ಮೂವರು ಹುಡುಗಿಯರು ಅರೆಬರೆ ಮಾಡರ್ನ್ ಡ್ರೆಸ್ ಧರಿಸಿರುವುದು ಫೋಟೋದಲ್ಲಿದೆ.
ಅನೇಕರು ಇದನ್ನು ಅಶ್ಲೀಲ ಮತ್ತು ಅಸಭ್ಯ ವರ್ತನೆ ಎಂದು ಕರೆದಿದ್ದಾರೆ. ಧಾರ್ಮಿಕ ಕಾರ್ಯಕ್ರಮಕ್ಕೆ ಈ ರೀತಿಯ ಬಟ್ಟೆ ಸೂಕ್ತವಲ್ಲ ಎಂದು ಇನ್ನೂ ಕೆಲವರು ಹೇಳಿದ್ದಾರೆ. ಕೆಲವರು ಧಾರ್ಮಿಕ ಕಾರ್ಯಕ್ರಮವೋ? ಇಲ್ಲ ಫ್ಯಾಶನ್ ಶೋನಾ? ಎಂದು ಪ್ರಶ್ನಿಸಿದ್ದಾರೆ.