ಹಾವೇರಿ: ಜಿಲ್ಲೆಯ ಶಿರಗೋಡ ಗ್ರಾಮದ ಗ್ರಾಮದೇವಿ ಹಿಂದೂ ಮಹಾಗಣಪತಿ ಯುವಕ ಸಂಘದವರು ವಿಶೇಷವಾಗಿ ಗಣೇಶ ವಿಸರ್ಜನೆ ಮಾಡಿ ಧಾರ್ಮಿಕ ಆಧ್ಯಾತ್ಮಿಕ ಕಾರ್ಯಕ್ಕೆ ಕೈ ಜೋಡಿಸಿದರು.
ಹೌದು, ಹಾವೇರಿ ಜಿಲ್ಲೆಯ ಶಿರಗೋಡ ಗ್ರಾಮದ, ಗ್ರಾಮದೇವಿ ಹಿಂದೂ ಮಹಾಗಣಪತಿ ಯುವಕ ಸಂಘದವರು ಸಾಂಪ್ರದಾಯಿಕವಾಗಿ ಡೋಲು ಬಾರಿಸುವ ಮೂಲಕ ಗಣೇಶ ವಿಸರ್ಜನೆ ಮಾಡಿ, ಡಿಜೆ ಹಣದಲ್ಲಿ ಊರಿನ ಸ. ಹಿ. ಪ್ರಾ. ಶಾಲೆಗೆ ಕಮಿಟಿಯವರು ಮತ್ತು ಇತರೆ ದಾನಿಗಳು ಸೇರಿ 15 ಡೆಸ್ಕ್ ಜೊತೆಗೆ ಆನವಟ್ಟಿ-ಹಾನಗಲ್ ಮತ್ತು ಹನುಮನಕೊಪ್ಪ ರಸ್ತೆಗಳಲ್ಲಿ ಊರಿಗೆ ಹೋಗುವ ದಾರಿಗೆ ಬೊರ್ಡ್ ಮತ್ತು ಊರಿನ ಈಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ ಹಣ ಕೊಟ್ಟು ಇತರರಿಗೆ ಮಾದರಿಯಾಗುವಂತೆ ಹಬ್ಬವನ್ನ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀಧರ ಕೋಟಿಬಾಗರ, ಬೀಟ್ ಪೊಲೀಸ್ ಅಧಿಕಾರಿ ರಕ್ತಸೈನಿಕ ಕರಬಸಪ್ಪ ಗೊಂದಿ, ಮುಖ್ಯೋಪಾಧ್ಯಾಯ ಮತ್ತು ಶಿಕ್ಷಕರು ಮಹೇಶ ಹಿರೇಮಠ, ಕರಬಸಗೌಡ ಪಾಟೀಲ, ಪ್ರಕಾಶ ಲಕ್ಕುಂಡಿ, ಮಹಾರಾಜ್ ಮೂಗೂರು, ಗಣಪತಿ ಕಮಿಟಿಯ ವಿನಯಗೌಡ ಚನ್ನಗೌಡ್ರ, ರಾಕೇಶ ಕಲ್ಲಾಪುರ, ವಿನಾಯಕ ಐ.ಜಿ, ಶರತ್ ಚನ್ನಗೌಡ್ರ, ಶರಣಬಸಪ್ಪ ಕತ್ತಿ, ಪ್ರಜ್ವಲ್ ಲಕ್ಕೊಳ್ಳಿ, ಮನೋಜ ಕಲ್ಲಾಪುರ ಇತರರು ಉಪಸ್ಥಿತರಿದ್ದರು.