ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರದ ಪ್ರಾಧ್ಯಾಪಕರು ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸಿ ಅರ್ಥಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಕೊಟ್ಟಿರುವ ಹೇಳಿಕೆಯು ಸತ್ಯಕ್ಕೆ ದೂರವಾಗಿದ್ದು, ಅವರು ನೀಡಿರುವ ಹೇಳಿಕೆಯಲ್ಲಿ ಯಾವುದೇ ಹುರಳಿಲ್ಲ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕರ ವೇದಿಕೆಯು ಖಂಡಿಸಿದೆ.
ಶೈಕ್ಷಣಿಕ ವರ್ಷ 2024-25ರ ಪ್ರಾರಂಭದಲ್ಲಿಯೇ ಬಿಕಾಂ ಮೊದಲ ಸೆಮಿಸ್ಟರ್ ಮತ್ತು ಎರಡನೆಯ ಸೆಮಿಸ್ಟರಗೆ ಸಂಬಂಧಿಸಿದಂತೆ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ರಾಜ್ಯ ಸರ್ಕಾರದ ನಿರ್ದೇಶನದ ಅನ್ವಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಅಕಾಡೆಮಿಕ್ ಸೆಕ್ಷನಿಂದ ಬಂದ ಅಧಿ ಸೂಚನೆಯ ಮೂಲಕ ಅರ್ಥಶಾಸ್ತ್ರ ಪ್ರಾಧ್ಯಾಪಕರು ವಿಷಯವನ್ನು ಬೋಧಿಸ ಬೇಕಾಗಿರುತ್ತದೆ.
ಬಿಕಾಂ ಮೊದಲ ಸೆಮಿಸ್ಟರ್ ಎಂಬಿಬಿಡಿ ವಿಷವನ್ನು ಬೋಧಿಸಿ ಹಾಗೂ ಪ್ರಶ್ನೆ ಪತ್ರಿಕೆಯನ್ನು ಅರ್ಥಶಾಸ್ತ್ರದ ಪ್ರಾಧ್ಯಾಪಕರು ಸಿದ್ಧಪಡಿಸಿರುತ್ತಾರೆ. ಅದರ ಪ್ರಕಾರ ಅರ್ಥಶಾಸ್ತ್ರದ ಪ್ರಾಧ್ಯಾಪಕರು ಮೌಲ್ಯಮಾಪನ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಇದನ್ನು ವಿರೋಧಿಸಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರ ವೇದಿಕೆಯು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಹಾಗೂ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿಯನ್ನು ರವಾನಿಸುತ್ತಿದ್ದಾರೆ.
ಆಧಾರ ದಾಖಲೆಗಳು:
1. ದಿನಾಂಕ 22 -10 -2024 ರಂದು ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್ಗೆ ಅರ್ಥಶಾಸ್ತ್ರ ವಿಷಯವನ್ನು ಅರ್ಥಶಾಸ್ತ್ರ ಪ್ರಾಧ್ಯಾಪಕರೇ ಭೋದಿಸಬೇಕೆಂದು ಹೊರಡಿಸಿದ ರಾ.ಚ. ವಿ ಸುತ್ತೋಲೆ.
2. ವಿದ್ಯಾ ವಿಷಯಕ ಪರಿಷತ್ತಿನ ಸಾಮಾನ್ಯ ಸಭೆಯ ದಿನಾಂಕ : 27-09 -2018
3. ಮಾನ್ಯ ಕುಲಪತಿಗಳ ಅನುಮೋದನೆಯ ದಿನಾಂಕ: 21.10.2024
4. ಅರ್ಥಶಾಸ್ತ್ರ ವಿಷಯದ ಮೌಲ್ಯಮಾಪನ ಆದೇಶ ಪ್ರತಿಗಳು
5. ಕರ್ನಾಟಕ ಸರ್ಕಾರದ ನಡಾವಳಿಗಳು ದಿನಾಂಕ : 8-05. 2024
6. ಯು ಜಿ ಸಿ ಮಾರ್ಗಸೂಚಿಯ ಪ್ರಕಾರ ಕಡ್ಡಾಯವಾಗಿ ಬಿಕಾಂ ವಿಭಾಗದಲ್ಲಿ ಒಂದರಿಂದ ಆರನೆಯ ಸೆಮಿಸ್ಟರಗೆ ಅರ್ಥಶಾಸ್ತ್ರ ಪಠ್ಯಕ್ರಮ ರಚಿಸಿ ಬೋಧಿಸುವ ಸುತ್ತೋಲೆ.